ನಮ್ಮಳಗಿನ ಬಹುತ್ವ ಗುರುತಿಸುವ ಕೆಲಸವಾಗಬೇಕು: ಚಿಂತಕ ಸುಂದರ ಸಾರುಕೈ
ನೀನಾಸಂ ಸಂಸ್ಕೃತಿ ಶಿಬಿರ-2016ರ ಸಮಾರೋಪ ಸಮಾರಂಭ

ಸಾಗರ,ಅ.12: ಬಹುತ್ವವನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮ್ಮಳಗೆ ನಿರಂತರ ಶೋಧ ನಡೆಯಬೇಕು. ಒಳಗಿನ ಹಾಗೂ ಹೊರಗಿನ ಸಂಗತಿಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿದಾಗ ಮಾತ್ರ ಬಹುತ್ವದ ವಿವಿಧ ಮಜಲುಗಳನ್ನು ಅರಿಯಬಹುದು ಎಂದು ಬೆಂಗಳೂರಿನ ಚಿಂತಕ ಸುಂದರ ಸಾರುಕೈ ಹೇಳಿದರು.
ತಾಲೂಕಿನ ಹೆಗ್ಗೋಡಿನಲ್ಲಿ ಬುಧವಾರ ನೀನಾಸಂ ಸಂಸ್ಕೃತಿ ಶಿಬಿರ-2016ರ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮೋಳಗೆ ಇರುವ ಬಹುತ್ವವನ್ನು ಗುರುತಿಸುವ ಕೆಲಸವಾಗಬೇಕು.ಸಂಸ್ಕೃತಿಶಿಬಿರದ ಎಲ್ಲ ದಿನಗಳ ವಿಚಾರಧಾರೆಗಳು ಬಹುತ್ವದ ಮೇಲೆ ಕೇಂದ್ರಿಕೃತವಾಗಿತ್ತು. ಬಹುತ್ವವನ್ನು ಗುರುತಿಸಿಕೊಳ್ಳುತ್ತಲೇ ಏಕತೆಯನ್ನು ಸಾಧಿಸುವುದು ನಮ್ಮ ಮುಖ್ಯ ಗುರಿಯಾಗಬೇಕು ಎಂದರು. ಗ್ರೀಕ್ ಮತ್ತು ಯೂರೋಪ್ ತತ್ವಶಾಸ್ತ್ರದಲ್ಲಿ ಬಗ್ಗೆ ಹೆಚ್ಚಿನ ನಿಗಾವಹಿಸುವುದಿಲ್ಲ. ಆದರೆ ಭಾರತದ ವೇದ ಉಪನಿಷತ್ತುಗಳಲ್ಲಿ ಅನಂತತೆ ಪರಿಕಲ್ಪನೆ ಮೊದಲು ಬಂದಿದೆ. ಅನಂತತೆಯನ್ನು ಅರ್ಥ ಮಾಡಿಕೊಳ್ಳಲು ಬಹುತ್ವ ನಮಗೆ ಅಡ್ಡಿಯಾಗುತ್ತದೆ. ಸಂಖ್ಯೆ ಮತ್ತು ದೇಹ ಎಂಬ ಎರಡು ಮಾದರಿ ಮೂಲಕ ನಾವು ಬಹುತ್ವವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಶಿಬಿರದಲ್ಲಿ ಡಿ.ಎಸ್.ನಾಗಭೂಷಣ್,ಜಯಪ್ರಕಾಶ್ ಮಾವಿನಕುಳಿ,ಕೆ.ವಿ.ಅಕ್ಷರ, ಮಾಧವ ಚಿಪ್ಳಿ, ಟಿ.ಪಿ.ಅಶೋಕ್, ಜಸ್ವಂತ್ ಜಾಧವ್ ಇನ್ನಿತರರು ಹಾಜರಿದ್ದರು.





