ಅ.15-16: ಹೋಮಿಯೋಪಥಿ ರಾ. ಸಮ್ಮೇಳನ
ಮಂಗಳೂರು, ಅ.12: ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಆಶ್ರಯ ದಲ್ಲಿ ಅ.15 ಮತ್ತು 16ರಂದು ಕಂಕನಾಡಿಯ ಫಾದರ್ ಮುಲ್ಲರ್ ದಶಮಾನೋತ್ಸವ ಸ್ಮಾರಕ ಭವನದಲ್ಲಿ ಹೋಮಿಯೋಪಥಿ ರಾಷ್ಟ್ರೀಯ ಸಮ್ಮೇಳನ ‘ಎಸ್‌ಪ್ಲೋರರ್ 16’ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಆಯುಷ್ ವಿಭಾಗದ ನಿರ್ದೇಶಕ ರಾಜ್‌ಕಿಶೋರ್ ಸಿಂಗ್, ಡಾ.ಪಿ.ಸಂಪತ್‌ರಾವ್, ಡಾ.ಶ್ರೀಕಾಂತ್ ಮುಖ್ಯ ಅತಿಥಿಗಳಾಗಿ ಭಾಗವವಹಿಸಲಿದ್ದಾರೆ.
ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ವಂ.ಪ್ಯಾಟ್ರಿಕ್ ರೊಡ್ರಿಗಸ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





