Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಾರತದ ಪ್ರಜಾಪ್ರಭುತ್ವಕ್ಕೆ...

ಭಾರತದ ಪ್ರಜಾಪ್ರಭುತ್ವಕ್ಕೆ ಜಾತ್ಯತೀತತೆಯೇ ಕಾವಲು

-ಪ್ರೊ. ಆದಿತ್ಯ ಮುಖರ್ಜಿ-ಪ್ರೊ. ಆದಿತ್ಯ ಮುಖರ್ಜಿ12 Oct 2016 11:57 PM IST
share
ಭಾರತದ ಪ್ರಜಾಪ್ರಭುತ್ವಕ್ಕೆ ಜಾತ್ಯತೀತತೆಯೇ ಕಾವಲು

ನಾನು ಜೆಎನ್‌ಯು(ಜವಾಹರಲಾಲ್ ನೆಹರೂ ವಿವಿ, ದಿಲ್ಲಿ)ನವನು, ಮತ್ತು ನಾನು ಭಯೋತ್ಪಾದಕರ ಶಿಕ್ಷಕನ ಹಾಗೆ ಕಾಣಿಸುತ್ತಿದ್ದೇನೆಯೇ?. ಕಳೆದ 6 ತಿಂಗಳುಗಳಲ್ಲಿ ಇಂತಹ ತಲೆಬುಡವಿಲ್ಲದ ಆರೋಪಗಳಿಂದ ನಾವು ರೋಸಿಹೋಗಿದ್ದೇವೆ.
  ಸ್ವಾತಂತ್ರಕ್ಕಾಗಿ ಭಾರತ ನಡೆಸಿದ ಹೋರಾಟವು ಯಾವುದೇ ಕ್ರಾಂತಿಗಿಂತಲೂ ಕಡಿಮೆಯಿಲ್ಲ. ಆದರೆ ಇದನ್ನು ನಾವು ‘ಭಾರತೀಯ ಕ್ರಾಂತಿ’ ಎಂದು ಕರೆಯದಿರುವುದು ವಿಷಾದಕರ. ಇದೊಂದು ಶತಮಾನಕ್ಕೂ ಅಕ ಕಾಲದವರೆಗೆ ನಡೆದ ಸುದೀರ್ಘ ಸಂಘರ್ಷವಾಗಿದೆ ಹಾಗೂ ಮನುಕುಲದ ಇತಿಹಾಸದ ಯಾವುದೇ ಸಮಯದಲ್ಲಿ ಅಥವಾ ಯಾವುದೇ ಸ್ಥಳದಲ್ಲಿ ನಡೆದ ಅತ್ಯಂತ ಬೃಹತ್ ಸಾಮೂಹಿಕ ಚಳವಳಿಯಾಗಿದೆ. ಯುರೋಪ್ ಹಾಗೂ ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ನಡೆದ ಕ್ರಾಂತಿಗಳಲ್ಲಿ ಕೈಬೆರಳಣಿಕೆಯ ನಾಯಕರು ಶಸಾಸಗಳನ್ನು ಕೈಗೆತ್ತಿಕೊಂಡು ಸರಕಾರಗಳನ್ನು ಉರುಳಿಸಿದ್ದರು. ಆದರೆ ನಮ್ಮ ಕ್ರಾಂತಿಯು ಅದರಂತಿರದೆ, ಭಾರತೀಯ ಜನಸಮೂಹ, ಬಡವರು, ಕಾರ್ಮಿಕರು, ರೈತರು ಮತ್ತಿತರರನ್ನು ಒಳಗೊಂಡಿತ್ತು ಮತ್ತು ಎಲ್ಲ ವರ್ಗದವರೂ ಸ್ವಾತಂತ್ರ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

ಜಗತ್ತಿನ ವಿವಿಧೆಡೆ ನಡೆದ ಸಶಸ ಕ್ರಾಂತಿಗಳು ಒಂದೇ ಭಾಷೆ, ಒಂದೇ ಧರ್ಮ, ಒಂದೇ ವಿಚಾರಧಾರೆಯುಳ್ಳ ದೇಶಗಳ ಸೃಷ್ಟಿಗೆ ಕಾರಣವಾಯಿತು. ಇದರಿಂದಾಗಿ ಈ ದೇಶಗಳಲ್ಲಿ ಆಂತರಿಕ ಬಿಕ್ಕಟ್ಟು ಅಷ್ಟೇ ಏಕೆ ಅಂತರ್ಯುದ್ಧವೂ ನಡೆದು ಲಕ್ಷಾಂತರ ಮಂದಿ ಸಾವನ್ನಪ್ಪಿದರು ಹಾಗೂ ಅಂತಹ ದೇಶಗಳು ಇತರರ ಮೇಲೂ ಪಾರಮ್ಯವನ್ನು ಸ್ಥಾಪಿಸಲು ಹಂಬಲಿಸಿದವು. ನಮ್ಮ ಸ್ವಾತಂತ್ರ ಹೋರಾಟವು ಪ್ರತಿಯೊಂದು ಭಾಷೆ, ಪ್ರತಿಯೊಂದು ಧರ್ಮ, ಪ್ರತಿಯೊಂದು ಪ್ರಾಂತದ ಜನಸಮೂಹವನ್ನು ಒಳಗೊಂಡಿತ್ತು ಹಾಗೂ ಇವರೆಲ್ಲರೂ ಒಟ್ಟಾಗಿ ಸ್ವಾತಂತ್ರಕ್ಕಾಗಿ ಹೋರಾಡಿದರು. ಕನ್ನಡ, ತಮಿಳು, ತೆಲುಗು, ಬಂಗಾಳಿ ಹಾಗೂ ಅಸ್ಸಾಮಿ ಭಾಷೆಗಳ ಮಹಾನ್ ಕವಿಗಳು, ಮಹಾನ್ ರಾಷ್ಟ್ರೀಯವಾದಿಗಳೂ ಆಗಿದ್ದರು. ಶ್ರೇಷ್ಠ ಬುದ್ಧಿಜೀವಿಗಳು ಕೂಡಾ ಜನಸಮೂಹದ ಮಹಾ ನಾಯಕರೂ ಆಗಿದ್ದರು ಹಾಗೂ ವಿದ್ಯಾರ್ಥಿಗಳು ಸ್ವಾತಂತ್ರ ಹೋರಾಟಕ್ಕೆ ಧುಮುಕುವಂತೆ ಪ್ರೇರೇಪಿಸಿದವರು ಶಾಲಾಶಿಕ್ಷಕರಾಗಿದ್ದರು.

ಈ ಕೆಳಗಿನ ಮೂರು ಚಿಂತನೆಗಳು ನಮ್ಮ ಸ್ವಾತಂತ್ರ ಹೋರಾಟವನ್ನು ಹಾಗೂ ನಮ್ಮ ದೇಶವನ್ನು ರೂಪಿಸಿದವೆಂಬುದನ್ನು, ಕಾಂಗ್ರೆಸ್‌ನಿಂದ ಹಿಡಿದು ಎಡಪಕ್ಷಗಳಿಗೆ ಸೇರಿದ ಪ್ರತಿಯೊಬ್ಬ ಸ್ವಾತಂತ್ರ ಹೋರಾಟಗಾರನು ಒಪ್ಪಿಕೊಂಡಿದ್ದನು.
1, ವಸಾಹತುಶಾಹಿವಾದದಿಂದ ಸ್ವಾತಂತ್ರ 2. ಪ್ರಜಾಪ್ರಭುತ್ವ, ಸರ್ವರನ್ನೂ ಒಳಪಡಿಸುವಿಕೆ ಹಾಗೂ ಜಾತ್ಯತೀತತೆ 3. ಬಡವರ ಪರ ನೀತಿಗಳು.
  ಬ್ರಿಟಿಷರ ಆಗಮನಕ್ಕೆ ಮೊದಲು ಭಾರತವು ಬಹುಧರ್ಮೀಯ, ಬಹುಭಾಷಿಕ, ಬಹುಸಂಸ್ಕೃತಿಯ ಸಮಾಜವಾಗಿತ್ತು. ಪ್ರವಾದಿಯವರ ಜೀವಿತಾವಯಲ್ಲೇ ಇಲ್ಲಿಗೆ ಇಸ್ಲಾಂನ ಆಗಮನವಾಗಿತ್ತು ಹಾಗೂ ಕ್ರೈಸ್ತ ಧರ್ಮಕ್ಕೆ ಬುನಾದಿ ಹಾಕಲ್ಪಟ್ಟ ಅಲ್ಪ ಸಮಯದಲ್ಲೇ ಅದು ಕೂಡಾ ಆಗಮಿಸಿತ್ತು. ಈ ಎರಡೂ ಧರ್ಮಗಳು ನೆರೆಯ ರಾಜ್ಯವಾದ ಕೇರಳದ ಮೂಲಕ ಭಾರತವನ್ನು ಪ್ರವೇಶಿಸಿದ್ದವು. ಆ ಸಮಯದಲ್ಲಿ ಹಿಂದೂ ಧರ್ಮವು ಈಗ ವ್ಯಾಖ್ಯಾನಿಸಲ್ಪಡುತ್ತಿರುವ ರೀತಿಯಲ್ಲಿ ಅಸ್ತಿತ್ವದಲ್ಲಿರಲಿಲ್ಲ. ನಮ್ಮ ಜನತೆಯ ವಿವಿಧ ಆಚರಣೆಗಳು ಹಾಗೂ ಪರಂಪರೆಗಳು ಆಗ ಅಸ್ತಿತ್ವದಲ್ಲಿದ್ದವು. ಕೆಲವರು ಬೇವಿನ ಮರವನ್ನು ಆರಾಸಿದರೆ, ಇನ್ನು ಕೆಲವರು ಅಶ್ವತ್ಥ ವೃಕ್ಷವನ್ನು, ಕೆಲವರು ಗೋವನ್ನು, ಕೆಲವರು ಕಲ್ಲುಗಳನ್ನು, ಕೆಲವರು ವಿಗ್ರಹಗಳನ್ನು ಪೂಜಿಸುತ್ತಿದ್ದರು. ಆದರೆ ಅವರೆಲ್ಲರೂ ಸಹಬಾಳ್ವೆಯನ್ನು ನಡೆಸುತ್ತಿದ್ದರು ಹಾಗೂ ಈ ಧಾರ್ಮಿಕ ಚಿಹ್ನೆಗಳು, ಜಗಳದ ವಿಷಯಗಳಾಗುತ್ತಿರಲಿಲ್ಲ.

ನಮ್ಮ ಅಸ್ತಿತ್ವದ 5 ಸಾವಿರ ವರ್ಷಗಳಿಂದೀಚೆಗೆ ವಾದ ಅಥವಾ ತರ್ಕಗಳು ಹಾಗೂ ವೈವಿಧ್ಯಮಯ ಅಭಿಪ್ರಾಯಗಳನ್ನು ಗೌರವಿಸುವುದು ನಮ್ಮ ಹೃದಯದಲ್ಲಿ ಅಳವಾಗಿ ಬೇರೂರಿದೆ. ಹೀಗಾಗಿಯೇ ಭಾರತದ ಕಲ್ಪನೆಯೇ ಈ ಎಲ್ಲಾ ಆಚರಣೆಗಳು ಹಾಗೂ ಪರಂಪರೆಗಳು ಮತ್ತು ವೈವಿಧ್ಯತೆಗಳನ್ನು ಒಳಗೊಂಡಿರುವಂತಹದ್ದಾಗಿದೆ. ಒಂದು ರಾಷ್ಟ್ರವಾಗಿ ನಾವು ಸ್ವಾತಂತ್ರಕ್ಕಾಗಿ ಹೋರಾಡಬಲ್ಲೆವು ಮತ್ತು ಒಂದು ದೇಶವಾಗಿ ಬಾಳಬಲ್ಲೆವು ಎಂಬುದನ್ನು ನಿಜಕ್ಕೂ ಸಾಬೀತುಪಡಿಸಿ ತೋರಿಸಿದ್ದೇವೆ.
ಕೆಲವರು ವಾದಿಸುವಂತೆ ಪ್ರಜಾಪ್ರಭುತ್ವದ ಕಲ್ಪನೆಯನ್ನು ನಾವು ಯುರೋಪ್‌ನಿಂದ ಬಳವಳಿಯಾಗಿ ಪಡೆದಿಲ್ಲ. ಬಾಲಗಂಗಾಧರ್ ತಿಲಕ್ ಅವರು 19ನೆ ಶತಮಾನದಲ್ಲಿ ಬರೆದ ಲೇಖನವೊಂದರಲ್ಲಿ ಸಾರ್ವತ್ರಿಕ ವಯಸ್ಕ ಮತದಾನ ವ್ಯವಸ್ಥೆಯ ಕಲ್ಪನೆಯನ್ನು ಬಿತ್ತಿದ್ದರು. ಆಗ ಜಗತ್ತಿನ ಯಾವುದೇ ದೇಶದಲ್ಲಿಯೂ ಕೂಡಾ ಆ ರೀತಿಯ ಮತದಾನ ವ್ಯವಸ್ಥೆಯೇ ಇದ್ದಿರಲಿಲ್ಲ. ಬ್ರಿಟಿಷ್ ಆಡಳಿತದಲ್ಲಿ ಪ್ರಾಂತೀಯ ಅಸೆಂಬ್ಲಿಗಳ ರಚನೆಯಾದ ಕೂಡಲೇ ನಾವು ಆ ವ್ಯವಸ್ಥೆಯನ್ನು ಆಚರಣೆಗೆ ತಂದೆವು. 1960ರ ದಶಕದಲ್ಲಿ ಅಮೆರಿಕ ಹಾಗೂ ಬ್ರಿಟನ್ ದೇಶಗಳು ಗುಲಾಮಗಿರಿ ಹಾಗೂ ಸಮಾನತೆಯ ನಡುವಣ ಸಂಘರ್ಷದಲ್ಲಿ ತೊಳಲಾಡುತ್ತಿದ್ದಾಗ ನಾವು ಆಗಲೇ ಪ್ರಜಾತಾಂತ್ರಿಕ ಆಡಳಿತವನ್ನು ಸ್ಥಾಪಿಸಿದ್ದೆವು. ಎಲ್ಲರನ್ನೂ ಒಳಪಡಿಸುವಿಕೆ ಹಾಗೂ ಜಾತ್ಯತೀತತೆಯಿಂದಾಗಿ ಮಾತ್ರವೇ ಇದು ಸಾಧ್ಯವಾಗಿದೆ.

 ಬಡತನ ನಿರ್ಮೂಲನೆ ನಮ್ಮ ಸ್ವಾತಂತ್ರ ಹೋರಾಟದ ಮುಖ್ಯ ಗುರಿಯಾಗಿತ್ತು. ಗೋಖಲೆಯಿಂದ ಹಿಡಿದು ರಾನಡೆ, ಗಾಂ ಹಾಗೂ ಎಡಪಂಥೀಯ ನಾಯಕರವರೆಗೆ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಬಡತನ ನಿವಾರಣೆಯೇ ದೇಶದ ಮುಖ್ಯ ಕಾರ್ಯಸೂಚಿಯಾಗಿತ್ತು. ಆ ಕಾಲದ ಬಂಡವಾಳಶಾಹಿ ವರ್ಗ ಕೂಡಾ ಈ ಚಿಂತನೆಯಿಂದ ವಿಮುಖವಾಗಿರಲಿಲ್ಲ.
ನಮ್ಮ ನಾಯಕರ ದೂರದೃಷ್ಟಿಯು ಅಸಾಧಾರಣವಾಗಿತ್ತು. ಹಿಂದೂಗಳ ಹತ್ಯಾಕಾಂಡವಾದಾಗ ಮಹಾತ್ಮಾಗಾಂ ನೌಖಾಲಿಯಲ್ಲಿ ವಾಸ್ತವ್ಯ ಹೂಡಿದ್ದರು ಹಾಗೂ ಇದರ ವಿರುದ್ಧ ಬಿಹಾರದಲ್ಲಿ ಪ್ರತೀಕಾರ ಹತ್ಯೆಗಳು ನಡೆದಾಗ ನೆಹರೂ ಅವರ ಮಧ್ಯಾಂತರ ಸರಕಾರದ ಇಡೀ ಸಂಪುಟವು ಆ ರಾಜ್ಯದಲ್ಲಿ ಮೊಕ್ಕಾಂ ಹೂಡಿತ್ತು. ಸ್ವಾತಂತ್ರದ ಆರಂಭದ ದಿನಗಳಲ್ಲಿ ನೆಹರೂ ಅವರು ದಿಲ್ಲಿಗಿಂತಲೂ ಅಕ ಸಮಯವನ್ನು ಪಂಜಾಬ್‌ನಲ್ಲಿ ಕಳೆದಿದ್ದರು ಮತ್ತು ದೇಶವಿಭಜನೆಯ ನಂತರ ಉದ್ಭವಿಸಿದ ಪರಿಸ್ಥಿತಿಯನ್ನು ಶಮನಗೊಳಿಸಲು ಯತ್ನಿಸಿದ್ದರು. ಇಂದು ನಾವು ಗಲಭೆಗಳು ಹಾಗೂ ಹತ್ಯೆಗಳಿಗೆ ಕುಮ್ಮಕ್ಕು ನೀಡುವ ಸಚಿವರನ್ನು ಹೊಂದಿದ್ದೇವೆ.

ಈ ಹಿನ್ನೆಲೆಯಲ್ಲಿ ಗಾಂೀಜಿ ಅವರ ಕಗ್ಗೊಲೆಯು ಭಾರತವನ್ನು ರೂಪಿಸಿದಂತಹ ಸ್ವಾತಂತ್ರ, ಪ್ರಜಾಪ್ರಭುತ್ವ ಹಾಗೂ ಬಡತನ ನಿವಾರಣೆಯೆಂಬ ಮೂರು ಚಿಂತನೆಗಳನ್ನು ಬುಡಮೇಲುಗೊಳಿಸು ವುದಕ್ಕಾಗಿ ದಂಗೆಯೆಬ್ಬಿಸಲು ನಡೆಸಿದ ಒಂದು ಪ್ರಯತ್ನವಾಗಿತ್ತು. ಆದರೆ ಅದು ವಿಲಗೊಂಡಿತು.
 ಜಾತ್ಯತೀತತೆಯ ವಿಷಯದಲ್ಲಿ ಹೋರಾಡಿದ ಏಕೈಕ ಚುನಾವಣೆಯೆಂದರೆ ಅದು ಸ್ವತಂತ್ರ ಭಾರತದ ಪ್ರಪ್ರಥಮ ಚುನಾವಣೆಯಾಗಿತ್ತು. ಹಾಗೂ ಭಾರತದ ಪ್ರಜೆಗಳ ಜನಾದೇಶವು ಬಲವಾಗಿ ಜಾತ್ಯತೀತತೆಯ ಪರವಾಗಿತ್ತು. ಕೋಮುವಾದಿ ಪಕ್ಷಗಳು ಒಟ್ಟಾಗಿ, ಚಲಾಯಿತ ಮತಗಳ ಪೈಕಿ ಶೇ.6ಕ್ಕಿಂತಲೂ ಕಡಿಮೆ ಮತಗಳನ್ನು ಪಡೆದಿದ್ದವು ಹಾಗೂ ಲೋಕಸಭೆಯಲ್ಲಿ 10ಕ್ಕಿಂತಲೂ ಕಡಿಮೆ ಸ್ಥಾನಗಳನ್ನು ಗಳಿಸಿದ್ದವು.

  ನೆಹರೂ ಸರಕಾರದ ಕೈಯಲ್ಲಿ ಅಪಾರ ಹೊಣೆಗಾರಿಕೆಯಿತ್ತು. ಕೆಲವು ತಥಾಕಥಿತ ವಿಮರ್ಶಕರು, ಭಾರತದ ಮೊದಲ 40 ವರ್ಷಗಳು ವ್ಯರ್ಥವಾಗಿ ಕಳೆದುಹೋದವು ಎಂದು ಹೇಳಿ ಕೊಳ್ಳುತ್ತಿದ್ದಾರೆ. ಇದು ಸತ್ಯಕ್ಕೆ ತುಂಬಾ ದೂರವಾಗಿದೆ. ನಾವು ಸ್ವತಂತ್ರಗೊಂಡಾಗ ನಮ್ಮ ಬಳಿ ಆಹಾರವಿರಲಿಲ್ಲ, ಯಂತ್ರವಿರಲಿಲ್ಲ, ತಂತ್ರಜ್ಞಾನವಿರಲಿಲ್ಲ. ಹೀಗೆ ಏನೂ ಇರಲಿಲ್ಲ. ಕೋಮುವಾದಿ ಶಕ್ತಿಗಳು ಹರಡಿದ ವಿಷದಿಂದ ಹೊರಬರಲು ನಾವು ತೊಳಲಾಡುತ್ತಿದ್ದೆವು. ನೆಹರೂ ಸರಕಾರವು ಇವೆಲ್ಲ ವನ್ನೂ ಸಮರ್ಥವಾಗಿ ನಿಭಾಯಿ ಸಿತು. ನಾವು ಆಹಾರ ಹಾಗೂ ಔಷಧಗಳು ಸೇರಿದಂತೆ ಪ್ರತಿ ಯೊಂದು ಅಗತ್ಯವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. 1947ರಲ್ಲಿ ಸೂಜಿಯಿಂದ ಹಿಡಿದು ಪ್ರತಿಯೊಂದನ್ನೂ ನಾವು ಆಮದುಮಾಡಿಕೊಳ್ಳಬೇಕಿತ್ತಾದರೆ, 60ರ ದಶಕದೊಳಗೆ ಶೇ.45ಕ್ಕೂ ಅಕ ಸ್ವದೇಶಿಯಾಗಿದ್ದವು ಮತ್ತು 70ರ ದಶಕದಲ್ಲಿ ಹೆಚ್ಚುಕಮ್ಮಿ ಶೇ.90ರಷ್ಟು ಆಂತರಿಕ ಉತ್ಪನ್ನವಾಗಿತ್ತು. ಮೊದಲ ಪಂಚವಾರ್ಷಿಕ ಯೋಜನೆಯು ವಿಜ್ಞಾನ ಹಾಗೂ ತಂತ್ರಜ್ಞಾನದ ಶ್ರೇಷ್ಠ ಸಂಸ್ಥೆಗಳನ್ನು, ಸಾಹಿತ್ಯ ಅಕಾಡಮಿ ಹಾಗೂ ಲಲಿತ ಕಲಾ ಅಕಾಡಮಿಯನ್ನು ಸ್ಥಾಪಿಸಿತ್ತು. ಎರಡನೆ ಪಂಚವಾರ್ಷಿಕ ಯೋಜನೆಯು ಶ್ರೇಷ್ಠ ಕೈಗಾರಿಕೆಗಳಿಗೆ ಬುನಾದಿಯನ್ನು ಹಾಕಿತು.

1947ರಿಂದ 1990ರವರೆಗಿನ ಸಾಧನೆಗಳಿಲ್ಲದೆ 1991ರ ಆರ್ಥಿಕ ನೀತಿಗಳು ಅನುಷ್ಠಾನಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ ಇವೆಲ್ಲವನ್ನೂ ನಾವು ಸ್ವತಂತ್ರ ಹಾಗೂ ಪ್ರಜಾತಾಂತ್ರಿಕ ದೇಶವಾಗಿ ಸಾಸಿದ್ದೇವೆ. ಹೀಗಾಗಿ ಇದೊಂದು ಜಗತ್ತಿನ ಯಾವುದೇ ದೇಶಕ್ಕೂ ಸಾಧ್ಯವಾಗದಂತಹ ಅನನ್ಯ ಸಾಧನೆಯಾಗಿದೆ. ತಮ್ಮ ವಸಾಹತುಗಳಿಂದ ತರಲಾದ ಮನುಷ್ಯರು, ಹಣ ಹಾಗೂ ಸಾಮಗ್ರಿಗಳಿಂದಾಗಿ ಬ್ರಿಟನ್‌ನಲ್ಲಿ ಕೈಗಾರಿಕಾ ಕ್ರಾಂತಿ ನಡೆಯಿತು. ಗುಲಾಮ ಕಾರ್ಮಿಕರಿಂದಾಗಿ ಅಮೆರಿಕದ ಅಭಿವೃದ್ಧಿಯಾಯಿತು. ಅಮೆರಿಕ ಸರಕಾರದ ಅರೆ ಸಾರ್ವಭೌಮತೆಗೆ ಒಳಪಟ್ಟ ದೇಶವಾಗಿ ಜಪಾನ್ ಅಭಿವೃದ್ಧಿ ಹೊಂದಿತು. ಅರೆ ಸರ್ವಾಕಾರಿಶಾಹಿತ್ವದಿಂದಾಗಿ ಕೊರಿಯದ ಅಭಿವೃದ್ಧಿ ಸಾಧ್ಯವಾಯಿತು. ಬಲವಂತದ ಸಮುದಾಯ ದುಡಿಮೆಯಿಂದಾಗಿ ರಶ್ಯ ಹಾಗೂ ಚೀನಾಗಳು ಪ್ರಗತಿಯಾದವು. ಆದರೆ ಕಾರ್ಮಿಕ ಒಕ್ಕೂಟಗಳಿಗೆ ಅವಕಾಶ ನೀಡುವ ಮೂಲಕ, ವಾಕ್‌ಸ್ವಾತಂತ್ರಕ್ಕೆ ಹಾಗೂ ಮಾಧ್ಯಮಗಳಿಗೆ ಮುಕ್ತ ಅವಕಾಶವನ್ನು ನೀಡುವ ಮೂಲಕ ನಾವು ರಾಷ್ಟ್ರವಾಗಿ ಅಭಿವೃದ್ಧಿ ಹೊಂದಿದೆವು. ಹೀಗೆ ಜಗತ್ತಿನ ಬೇರೆಲ್ಲಿಯೂ ಸಂಭವಿಸಿಲ್ಲ. ಅಲಿಪ್ತ ರಾಷ್ಟ್ರ ಚಳವಳಿಯ ನಾಯಕನಾಗಿ ನಾವು ಅಮೆರಿಕದ ಯಜಮಾನಿಕೆಯ ವಿರುದ್ಧ 100 ದೇಶಗಳನ್ನು ಮುನ್ನಡೆಸಿದೆವು. ಕೆನಡದಂತಹ ದೇಶಗಳು ಸಹಿಹಾಕಿದರೂ ಅಣ್ವಸ ಪ್ರಸರಣೆ ತಡೆ ಒಪ್ಪಂದಕ್ಕೆ ನಾವು ಸಹಿಹಾಕಲು ನಿರಾಕರಿಸಿದೆವು. ಆಫ್ರಿಕದ ರಾಷ್ಟ್ರಗಳಂತೆ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ನಾವು ಮಣಿಯಲಿಲ್ಲ.

 ನಮ್ಮ ಎದುರಿಗೆ ಹಲವಾರು ಸವಾಲುಗಳಿವೆ ಹಾಗೂ ಅವು ಅತ್ಯಂತ ಸ್ಪಷ್ಟವಾಗಿವೆ. ಒಂದು ವೇಳೆ ಈ ದೇಶವನ್ನು ಉಳಿಸಿ, ನಿರ್ಮಿಸ ಬೇಕೆಂದಿದ್ದರೆ ನಾವು ಈ ಸವಾಲುಗಳನ್ನು ಎದುರಿಸಿ ನಿಲ್ಲಬೇಕಾಗಿದೆ.
     ಕೋಮುವಾದಿ ್ಯಾಶಿಸ್ಟ್ ಚಳವಳಿಯು ಈಗಾಗಲೇ ಬುದ್ಧಿಜೀವಿ ಗಳನ್ನು ಗುರಿಯಿರಿಸಿದೆ. ಗೂಂಡಾಶಕ್ತಿ ಹಾಗೂ ಆಡಳಿತ ಶಕ್ತಿಯು ವಿರೋಧವನ್ನು ದಮನಿಸಲು ಒಟ್ಟಾಗಿ ಶ್ರಮಿಸುತ್ತಿವೆ. ಜನತೆಯನ್ನು ಜಾತ್ಯತೀತ, ಮುಕ್ತ, ವೈಚಾರಿಕ ಕ್ಷೇತ್ರದಿಂದ ಪ್ರಗತಿವಿರೋ, ಕೋಮು ವಾದ ಹಾಗೂ ಸಂಕುಚಿತ ಮನೋಭಾವದೆಡೆಗೆ ಜನರನ್ನು ಎಳೆಯಲು ಪ್ರಯತ್ನಗಳು ನಡೆಯುತ್ತಿವೆ. ಈವರೆಗೂ ನಾವು ನಮ್ಮದೇ ಆದ ಚಿಂತನಾಕ್ರಮವನ್ನು ಹೊಂದಿಲ್ಲ, ನಾವು ಇನ್ನಷ್ಟೇ ವಸಾಹತುಶಾಹಿ ಮನೋಭಾವದಿಂದ ಮುಕ್ತಗೊಳ್ಳಬೇಕಾಗಿದೆ. ಕಳೆದ ಎರಡು ದಶಕಗಳಲ್ಲಿ ನಾವು ಅಸಮಾನತೆಯೆಂಬ ಅಶ್ಲೀಲತೆಯನ್ನು ಕಾಣುತ್ತಿದ್ದೇವೆ. ಬಡವರ ಪರ ಭಾರತವೆಂಬ ನಮ್ಮ ಆದರ್ಶವನ್ನು ನಾವು ಕೈಬಿಡುತ್ತಿದ್ದೇವೆ. ಈಗಲೂ ಶೇ.40ರಷ್ಟು ಮಂದಿಗೆ ತಿನ್ನಲು ಸಾಕಷ್ಟು ಆಹಾರವಿಲ್ಲ ಹಾಗೂ ಶೇ.30ರಷ್ಟು ಮಂದಿ ಶಾಲೆಗೂ ಹೋಗುತ್ತಿಲ್ಲ. ಹೀಗಾಗಿ ಬಡವರು ಆಹಾರ ಮತ್ತು ಶಿಕ್ಷಣಕ್ಕಾಗಿ ಆಗ್ರಹಿಸುತ್ತಿದ್ದಾರೆ. ಚಿಂತಕರಿಂದ ಜವಾಬ್ದಾರಿಯ ತ್ಯಜಿಸುವಿಕೆ ಇನ್ನೊಂದು ಮಹತ್ತರ ಸವಾಲಾಗಿದೆ. ಶ್ರೇಷ್ಠ ಮೇಧಾವಿಗಳು ಸ್ವಾತಂತ್ರ ಸಂಗ್ರಾಮದ ನೇತೃತ್ವ ವಹಿಸಿದ್ದರೆ, ಈಗಿನ ಚಿಂತಕರು ಅದಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಬಡವರೆಡೆಗೆ ತಮ್ಮ ಮುಖಗಳನ್ನು ತಿರುಗಿಸುವಂತೆ ಮಹಾತ್ಮಾಗಾಂೀಜಿ ಬುದ್ಧಿಜೀವಿಗಳಿಗೆ ಕರೆ ನೀಡಿದ್ದರು. ಇದೀಗ ದೇಶದೆಡೆಗೆ ತಮ್ಮ ಮುಖವನ್ನು ತಿರುಗಿಸುವಂತೆ ಬುದ್ಧಿಜೀವಿಗಳಿಗೆ ಕರೆ ನೀಡುವ ಕಾಲವೀಗ ಬಂದಿದೆ.

share
-ಪ್ರೊ. ಆದಿತ್ಯ ಮುಖರ್ಜಿ
-ಪ್ರೊ. ಆದಿತ್ಯ ಮುಖರ್ಜಿ
Next Story
X