ಕಣ್ಣೂರು: ಎಸ್‌ಡಿಪಿಐ ಕಾರ್ಯಕರ್ತನ ಬರ್ಬರ ಹತ್ಯೆ
ಮುಂದುವರಿದ ಹತ್ಯೆ ಸರಣಿ

ಕಾಸರಗೋಡು, ಅ.13: ಕಣ್ಣೂರಿನಲ್ಲಿ ಹತ್ಯಾ ಸರಣಿ ಮುಂದುವರಿದಿದ್ದು, ಎಸ್‌ಡಿಪಿಐ ಕಾರ್ಯಕರ್ತಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕಣ್ಣೂರು ಪೇಟೆಯಲ್ಲಿಂದು ಮಧ್ಯಾಹ್ನ ನಡೆದಿದೆ.
ಕಣ್ಣೂರು ನೀರ್ಚಾಲ್ ನಿವಾಸಿ ಫಾರೂಕ್(45) ಕೊಲೆಯಾದವರು. ಕೃತ್ಯಕ್ಕೆ ಸಂಬಂಧಿಸಿ ರವೂಫ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೊಲೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ರಾಜಕೀಯ ದಳ್ಳುರಿಗೆ ಸಿಲುಕಿರುವ ಕಣ್ಣೂರಿನಲ್ಲಿ ಕಳೆದ ನಾಲ್ಕು ದಿನಗಳಲ್ಲಿ ನಡೆದ ಮೂರನೆ ಹತ್ಯೆ ಇದಾಗಿದೆ.
ನಿನ್ನೆ ನಡೆದ ಬಿಜೆಪಿ ಕಾರ್ಯಕರ್ತ ರಮಿತ್ ಹತ್ಯೆಯ ಹಿನ್ನೆಲೆಯಲ್ಲಿ ಇಂದು ಕೇರಳದಲ್ಲಿ ಹರತಾಳ ನಡೆಯುತ್ತಿದೆ. ಈ ನಡುವೆ ಮತ್ತೊಂದು ಕೊಲೆ ನಡೆದಿರುವುದು ಪರಿಸರವಾಸಿಗಳನ್ನು ಭಯಭೀತರನ್ನಾಗಿಸಿದೆ.
Next Story





