ಹರತಾಳದಲ್ಲಿ ಬಿಜೆಪಿ ನಿಗೂಢ ಉದ್ದೇಶ ಇರಿಸಿಕೊಂಡಿದೆ: ಸಿಪಿಎಂ
.jpg)
ತಿರುವನಂತಪುರಂ,ಅಕ್ಟೋಬರ್ 13: ಕಣ್ಣೂರಿನ ಸ್ಥಳೀಯ ಘಟನೆಯೊಂದನ್ನು ಮುಂದಿಟ್ಟು ರಾಜ್ಯಾದ್ಯಂತ ಹರತಾಳಕ್ಕಿಳಿದಿರುವ ಬಿಜೆಪಿ ನಿಗೂಢ ಉದ್ದೇಶವನ್ನು ಹೊಂದಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಹೇಳಿದ್ದಾರೆ.
ಕೋಝಿಕ್ಕೋಡ್‌ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ, ಬಿಜೆಪಿಯ ರಾಷ್ಟ್ರಾಧ್ಯಕ್ಷರು ಸೇರಿ ಮಾರ್ಕಿಸ್ಟರ ವಿರುದ್ಧ ಅಕ್ರಮಕ್ಕೆ ಕೂಗೆಬ್ಬಿಸಿದ್ದರು. ಇವರ ಕೂಗಿಗೆ ಕಿವಿಕೊಟ್ಟು ಆರೆಸ್ಸೆಸ್, ಎಲ್‌ಡಿಎಫ್ ಕಾರ್ಯಕರ್ತರ ವಿರುದ್ಧ ಅಕ್ರಮಕ್ಕಿಳಿದಿದ್ದಾರೆ. ರಾಜ್ಯದ ಕಾನೂನು ವ್ಯವಸ್ಥೆಗೆ ಹಾನಿಯೆಸಗಲು ಕೈಗೊಂಡಿರುವ ಕ್ರಮವಿದು. ಎಲ್‌ಡಿಎಫ್ ಸರಕಾರ ಅಧಿಕಾರಕ್ಕೆ ಬಂದ ನಂತರ ಐವರು ಸಿಪಿಎಂ ಕಾರ್ಯಕರ್ತರನ್ನು ಆರೆಸ್ಸೆಸಿಗರು ಕೊಲೆಗೈದಿದ್ದಾರೆಂದು ಅವರು ಹೇಳಿರುವುದಾಗಿ ವರದಿಯಾಗಿದೆ.
ಆರೆಸ್ಸೆಸ್,ಬಿಜೆಪಿ ನಡೆಸುತ್ತಿರುವ ದಾಳಿಗಳಿಗೆ ಕಾಂಗ್ರೆಸ್ ಮತ್ತು ಯುಡಿಎಫ್ ಮೌನಸಮ್ಮತಿ ನೀಡುತ್ತಿವೆ.ಆದ್ದರಿಂದ ಮೋಹನರನ್ನು ಕೊಲೆಗೈದಾಗ ಕೆಪಿಸಿಸಿ ಅಧ್ಯಕ್ಷರುಪ್ರತಿಕ್ರಿಯಿಸಲಿಲ್ಲ ಎಂದು ಕೊಡಿಯೇರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.





