ಐದು ಅಂತಸ್ತಿನ ಕಟ್ಟಡ ಕುಸಿತ
ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ಮುಂಬೈ, ಅ.13: ಉಪ ನಗರ ಬಾಂದ್ರಾದಲ್ಲಿ ಐದು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದ್ದು, ಕಟ್ಟಡದ ಅವಶೇಷಗಳಡಿ ಹಲವು ಮಂದಿ ಸಿಲುಕಿರುವ ಶಂಕೆಯಿದೆ.
ಬಾಂದ್ರಾ ಪೂರ್ವದ ಬೆಹ್ರಂಪಾಡ ಪ್ರದೇಶದಲ್ಲಿ ಈ ಘಟನೆ ಗುರುವಾರ ನಡೆದಿದೆ. ಅಗ್ನಿ ಶಾಮಕ ದಳ , ಆ್ಯಂಬುಲೆನ್ಸ್‌ಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಕಟ್ಟಡದ ಅವಶೇಷಗಳಡಿ ಹಲವು ಜನರು ಸಿಲುಕಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Next Story





