ಬಂಟರ ಮಾತೃ ಸಂಘಕ್ಕೆ ಅಧ್ಯಕ್ಷರು, ಸದಸ್ಯರ ಅವಿರೋಧ ಆಯ್ಕೆ
ಅಧ್ಯಕ್ಷರಾಗಿ ಮಾಲಾಡಿ ಅಜಿತ್ ಕುಮಾರ್ ರೈ ಪುನರಾಯ್ಕೆ

ಮಂಗಳೂರು, ಅ.13: ಬಂಟರ ಯಾನೆ ನಾಡವರ ಮಾತೃ ಸಂಘದ 2016-19ನೆ ಸಾಲಿನ ಅಧ್ಯಕ್ಷರು, ಸದಸ್ಯರ ಆಯ್ಕೆಯು ಚುನಾವಣೆ ರಹಿತವಾಗಿ ಅವಿರೋಧವಾಗಿ ನಡೆದಿದ್ದು, ಅಧ್ಯಕ್ಷರಾಗಿ ಮಾಲಾಡಿ ಅಜಿತ್ ಕುಮಾರ್ ರೈ ಪುನರಾಯ್ಕೆಯಾಗಿದ್ದಾರೆ.
ಚುನಾವಣೆಯ ಸಲುವಾಗಿ ಮಾತೃ ಸಂಘವು ಚುನಾವಣಾ ಆಯೋಗವನ್ನು ರಚಿಸಿ, ಅ. 15ರಂದು ಅಧ್ಯಕ್ಷರ ಚುನಾವಣೆ ಹಾಗೂ 21ರಂದು ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಗೆ ದಿನಾಂಕ ನಿಗದಿಪಡಿಸಿತ್ತು. ಆದರೆ, ಅಧ್ಯಕ್ಷ ಸ್ಥಾನ ಹಾಗೂ ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಿಂದ ಕಾರ್ಯಕಾರಿ ಸಮಿತಿಗೆ ಪ್ರತಿಸ್ಪರ್ಧಿಗಳಿಲ್ಲದೆ ನಾಮಪತ್ರಗಳು ಸಲ್ಲಿಕೆಯಾದ ಕಾರಣ ಅವಿರೋಧವಾಗಿ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಮುಖ್ಯ ಚುನಾವಣಾಧಿಕಾರಿ ಪ್ರಥ್ವಿರಾಜ್ ರೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಮೂರು ಜಿಲ್ಲೆಗಳ ಒಂಬತ್ತು ತಾಲೂಕುಗಳಿಗೆ ಕಾರ್ಯಕಾರಿ ಸಮಿತಿ ಸದಸ್ಯರು ಆಯ್ಕೆಗೊಂಡಿದ್ದು, ಕಾರ್ಕಳ ತಾಲೂಕಿನ ಮಹಿಳಾ ಮೀಸಲಾತಿ ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಆ ಹಿನ್ನೆಲೆಯಲ್ಲಿ ಸಂಘದ ಬೈಲಾ ಪ್ರಕಾರ ತಾಲೂಕಿನ ಕಾರ್ಯಕರ್ತೆಯನ್ನು ಸದಸ್ಯೆಯಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಮೂರು ಜಿಲ್ಲೆಗಳಲ್ಲಿ ಒಟ್ಟು 17,ಐ942 ಮತದಾರರಿದ್ದಾರೆ ಎಂದು ಅವರು ಹೇಳಿದರು.
ಮಂಗಳೂರು ತಾಲೂಕು ಸಮಿತಿ ಸದಸ್ಯರು
ಮೇಘನಾಥ ಶೆಟ್ಟಿ, ಜಯರಾಮ ಸಾಂತ ಎಸ್., ಸುರೇಶ್ಚಂದ್ರ ಎಂ. ಶೆಟ್ಟಿ, ಎಂ. ಸುಂದರ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಎ. ಸುರೇಶ್ ರೈ, ಶಶಿರಾಜ್ ಶೆಟ್ಟಿ, ರತ್ನಾಕರ ಶೆಟ್ಟಿ, ರವೀಂದ್ರನಾಥ ಎಸ್. ಶೆಟ್ಟಿ, ಆನಂದ ಶೆಟ್ಟಿ, ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಕೃಷ್ಣ ಪ್ರಸಾದ್ ರೈ, ಉಮೇಶ್ ರೈ ಪದವು ಮೇಗಿನಮನೆ, ಗೋಪಾಲಕೃಷ್ಣ ಶೆಟ್ಟಿ, ಕೇಶವ ಮಾರ್ಲ, ವಿಕಾಸ್ ಶೆಟ್ಟಿ, ಡಾ.ಬಿ. ದೇವದಾಸ್ ರೈ, ವಸಂತ್ ಶೆಟ್ಟಿ, ಡಾ. ಬಿ. ಸಚ್ಚಿದಾನಂದ ರೈ, ಸಬಿತಾ ಆರ್. ಶೆಟ್ಟಿ.
ಕಾಸರಗೋಡು
ಸುಬ್ಬಯ್ಯ ರೈ ಬಿ., ಮಧುಕರ ರೈ ಕೊರೆಕ್ಕಾನ, ಮುಕ್ತಾನಂದ ರೈ, ಸತೀಶ್ ಅಡಪ್ಪ ಸಂಕಬೈಲು, ಲತಾ ಬಿ.ಆರ್., ಎಂ. ಪದ್ಮನಾಭ ಶೆಟ್ಟಿ ವಳಮಲೆ, ಸದಾನಂದ ರೈ ಎಡ್ವಕೇಟ್, ಕೆ. ರಘು ಶೆಟ್ಟಿ, ಕಾರ್ತಿಕ್ ಶೆಟ್ಟಿ.
ಉಡುಪಿ
ಜಯಕರ ಶೆಟ್ಟಿ ಇಂದ್ರಾಳಿ, ಮನೋಹರ್ ಶೆಟ್ಟಿ ತೋನ್ಸೆ, ವಿಠಲ ಶೆಟ್ಟಿ ಶೇಡಿಕೂಡ್ಲು, ಸುಧಾಕರ ಶೆಟ್ಟಿ ಮೈರ್ಮಾಡಿ, ಚಿತ್ತರಂಜನ್ ದಾಸ್ ಹೆಗ್ಡೆ, ಎಚ್. ಶಿವಪ್ರಸಾದ್ ಹೆಗ್ಡೆ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಎಚ್. ಸುದರ್ಶನ ಹೆಗ್ಡೆ, ಗೀತಾ ನಾಗೇಶ್ ಹೆಗ್ಡೆ.
ಕುಂದಾಪುರ
ಕೆಂಚನೂರು ಸೋಮಶೇಖರ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ಕೃಷ್ಣ ಪ್ರಸಾದ್ ಅಡ್ಯಂತಾಯ, ಆವರ್ಸೆ ಸುಧಾಕರ ಶೆಟ್ಟಿ, ಕೆ. ವಿಕಾಸ್ ಹೆಗ್ಡೆ, ಬಿ. ಕರುಣಾಕರ ಶೆಟ್ಟಿ ಕೊಲ್ಲೂರು, ಚಿತ್ತರಂಜನ್ ಹೆಗ್ಡೆ ಹರ್ಕೂರು, ಸುಪ್ರೀತಾ ದೀಪಕ್ ಶೆಟ್ಟಿ, ಜಿ. ಗೋಕುಲ ಶೆಟ್ಟಿ.
ಕಾರ್ಕಳ
ಸುನಿಲ್ ಕುಮಾರ್ ಶೆಟ್ಟಿ, ಚೇತನ್ ಶೆಟ್ಟಿ, ಬಿ. ಕರುಣಾಕರ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಕೆ. ಮಂಜುನಾಥ ಶೆಟ್ಟಿ, ಬಿ. ಮಣಿರಾಜ್ ಶೆಟ್ಟಿ.
ಪುತ್ತೂರು
ದಯಾನಂದ ರೈ ಮನವಳಿಕೆ ಗುತ್ತು , ಕೆ. ಸೀತಾರಾಮ್ ರೈ ಸವಣೂರು, ಹೇಮನಾಥ ಶೆಟ್ಟಿ ಕಾವು, ಚಿಕ್ಕಪ್ಪ ನಾಕ್ ಎ., ಎನ್. ಚಂದ್ರಹಾಸ ಶೆಟ್ಟಿ ಮರ್ದಾಳ, ಜಯಪ್ರಕಾಶ್ ರೈ ನೂಜಿಬೈಲು, ಅಜಯ್ ಎಸ್. ಆಳ್ವ, ಮಲ್ಲಿಕಾ ಪ್ರಸಾದ್.
ಬಂಟ್ವಾಳ
ಚಂದ್ರಹಾಸ ಡಿ. ಶೆಟ್ಟಿ, ಕಿರಣ್ ಹೆಗ್ಡೆ, ಎ. ರಾಮಣ್ಣ ರೈ, ಸಂತೋಷ್ ಕುಮಾರ್ ರೈ, ಭಾಸ್ಕರ ಶೆಟ್ಟಿ, ನೇಮಿರಾಜ್ ರೈ, ಪ್ರಕಾಶ್ ಬಿ. ಶೆಟ್ಟಿ, ಪ್ರತಿಭಾ ಎ. ರೈ. ಬೆಳ್ತಂಗಡಿ: ಎಸ್. ಜಯರಾಂ ಶೆಟ್ಟಿ, ಎಂ. ಜಯರಾಮ್ ಭಂಡಾರಿ, ಜಯಂತ್ ಶೆಟ್ಟಿ ಕುಂಟಿಣಿ, ಆಶಾಲತಾ ಬಿ. ರೈ.
ಸುಳ್ಯ
ಪಿ.ಬಿ. ದಿವಾಕರ ರೈ ಪೆರಾಜೆ, ರವೀಂದ್ರನಾಥ್ ಶೆಟ್ಟಿ ಕೆ., ಜಯಪ್ರಕಾಶ್ ರೈ ಎನ್., ರಾಜೀವಿ ಆರ್. ರೈ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದರು.
ಗೋಷ್ಠಿಯಲ್ಲಿ ಉಪ ಚುನಾವಣಾಧಿಕಾರಿ ಉಮೇಶ ಶೆಟ್ಟಿ, ಚುನಾವಣಾಧಿಕಾರಿ ನವೀನ್‌ಕಮಾರ್ ಶೆಟ್ಟಿ, ಮೇಘನಾಥ ಶೆಟ್ಟಿ, ಸಿಎ ಕೆ. ಮನಮೋಹನ ಶೆಟ್ಟಿ, ಎ. ಹೇಮನಾಥ ಶೆಟ್ಟಿ ಕಾವು, ಜಯರಾಂ ಶಾಂತ ಉಪಸ್ಥಿತರಿದ್ದರು.







