ಪಾಕ್‌ನಲ್ಲಿ ಸ್ಪೇನ್ ರಾಜತಾಂತ್ರಿಕನ ಸಾವು

ಇಸ್ಲಾಮಾಬಾದ್, ಅ. 13: ಸ್ಪೇನ್‌ನ ರಾಜತಾಂತ್ರಿಕರೊಬ್ಬರು ತನ್ನ ಇಸ್ಲಾಮಾಬಾದ್‌ನ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪಾಕಿಸ್ತಾನ ಪೊಲೀಸರು ಹೇಳಿದ್ದಾರೆ. ಅದು ಆತ್ಮಹತ್ಯೆಯಾಗಿರಬಹುದು ಎಂಬುದಾಗಿ ಅಧಿಕಾರಿಗಳು ಶಂಕಿಸಿದ್ದಾರೆ.
60 ವರ್ಷದ ರಾಜತಾಂತ್ರಿಕ ತನ್ನ ಹಾಸಿಗೆಯಲ್ಲಿ ಸತ್ತು ಬಿದ್ದಿರುವುದನ್ನು ಅವರ ಮನೆಗೆಲಸದ ವ್ಯಕ್ತಿ ಕಂಡಿದ್ದಾರೆ. ರಾಜತಾಂತ್ರಿಕನ ಪಕ್ಕದಲೇ ರಿವಾಲ್ವರ್ ಇತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಲೆಯಲ್ಲಾದ ಗುಂಡಿನ ಗಾಯದಿಂದಾಗಿ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಇಸ್ಲಾಮಾಬಾದ್‌ನ ಸರಕಾರಿ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು. ಆದಾಗ್ಯೂ, ಶವಪರೀಕ್ಷೆ ನಡೆಯುವವರೆಗೆ ಸಾವು ಆತ್ಮಹತ್ಯೆಯಿಂದ ಸಂಭವಿಸಿದೆಯೇ ಎನ್ನುವುದನ್ನು ಹೇಳಲಾಗದು ಎಂದು ಅವರು ಹೇಳಿದರು.
Next Story





