ದೀರ್ಘಕಾಲೀನ ಥಾಯ್ಲೆಂಡ್ ದೊರೆ ನಿಧನ

ಬ್ಯಾಂಕಾಕ್, ಅ. 13: ಥಾಯ್ಲೆಂಡ್‌ನ ದೊರೆ ಭುಮಿಬೊಲ್ ಅಡುಲ್ಯಡೇಜ್ ನಿಧನರಾಗಿದ್ದಾರೆ ಎಂದು ಅರಮನೆ ಗುರುವಾರ ಘೋಷಿಸಿದೆ. 88 ವರ್ಷದ ದೊರೆ ಜಗತ್ತಿನಲ್ಲೇ ಅತಿ ಧೀರ್ಘ ಕಾಲ ಅಧಿಕಾರದಲ್ಲಿದ್ದ ದೊರೆಯಾಗಿದ್ದರು.
ಅವರ ಅಮೋಘ 70 ವರ್ಷಗಳ ಆಳ್ವಿಕೆ ಸಾವಿನೊಂದಿಗೆ ಅಂತ್ಯಗೊಂಡಿದೆ. ಇದರೊಂದಿಗೆ ದೇಶವು ತೀವ್ರ ಅನಿಶ್ಚಿತ ಭವಿಷ್ಯದತ್ತ ದಾಪುಗಾಲಿಟ್ಟಿದೆ.
ಥಾಯ್ಲೆಂಡ್‌ನ ಹೆಚ್ಚಿನ ನಿವಾಸಿಗಳು ಬೇರೆ ರಾಜರನ್ನೇ ನೋಡಿಲ್ಲ. ದಶಕಗಳ ರಾಜಕೀಯ ವಿಪ್ಲವ, ಕ್ಷಿಪ್ರಕ್ರಾಂತಿ ಮತ್ತು ಹಿಂಸಾತ್ಮಕ ಅಶಾಂತಿಯ ಅವಧಿಯಲ್ಲಿ ಮಾರ್ಗದರ್ಶಕರಾಗಿದ್ದರು ಎಂಬುದಾಗಿ ಅವರನ್ನು ಬಿಂಬಿಸಲಾಗಿದೆ.
‘‘ಅವರು ಸಿರಿರಾಜ್ ಆಸ್ಪತ್ರೆಯಲ್ಲಿ ಸ್ಥಳೀಯ ಸಮಯ ಅಪರಾಹ್ನ 3:52ಕ್ಕೆ ಶಾಂತಿಯಿಂದ ಇಹಲೋಕ ತ್ಯಜಿಸಿದರು’’ ಎಂದು ರಾಯಲ್ ಹೌಸ್‌ಹೋಲ್ಡ್ ಬ್ಯೂರೋ ಹೇಳಿಕೆಯೊಂದರಲ್ಲಿ ತಿಳಿಸಿದೆ.
ದೊರೆಯ 64 ವರ್ಷದ ಮಗ ಯುವರಾಜ ಮಹಾ ವಜೀರಲಾಂಗ್‌ಕಾರ್ನ್ ಉತ್ತರಾಧಿಕಾರಿಯಾಗಿದ್ದಾರೆ.
Next Story





