ಕಾಸರಗೋಡು: ಮಗುಚಿಬಿದ್ದ ಆಯಿಲ್ ಟ್ಯಾಂಕರ್

ಕಾಸರಗೋಡು, ಅ.13: ಆಯಿಲ್ ಸಾಗಾಟ ಮಾಡುತ್ತಿದ್ದ ಟ್ಯಾಂಕರೊಂದು ರಸ್ತೆಗೆ ಮಗುಚಿ ಬಿದ್ದ ಘಟನೆ ಗುರುವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯ ಪೆರಿಯ ಚಾಲಿಂಗಾಲ್‌ನಲ್ಲಿ ನಡೆದಿದೆ. ಇದರಿಂದ ಗಂಟೆಗಳ ಕಾಲ ಈ ದಾರಿಯಾಗಿ ಸಂಚಾರ ಅಸ್ತವ್ಯಸ್ತಗೊಂಡಿತು.
ಟ್ಯಾಂಕರ್‌ನಿಂದ ಆಯಿಲ್ ರಸ್ತೆಯುದ್ದಕ್ಕೂ ಹರಿದಿದ್ದು, ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಟ್ಯಾಂಕರ್ ಮುಂಬೈನಿಂದ ಕೊಚ್ಚಿಗೆ ರಬ್ಬರ್ ಆಯಿಲ್‌ನ್ನು ಸಾಗಿಸುತ್ತಿತ್ತು ಎಂದು ತಿಳಿದುಬಂದಿದೆ.
Next Story





