ಬೈಕಂಪಾಡಿ: ಬ್ಯಾಂಕ್‌ನಲ್ಲಿ ಕಳವಿಗೆ ಯತ್ನ
ಮಂಗಳೂರು, ಅ. 13: ವಿಜಯ ಬ್ಯಾಂಕ್ ಬೈಕಂಪಾಡಿ ಶಾಖೆಯಲ್ಲಿ ಕಳವಿಗೆ ವಿಫಲ ಯತ್ನ ನಡೆದಿರುವುದು ಇಂದು ಬೆಳಕಿಗೆ ಬಂದಿದೆ.
ಕಳೆದ ಶನಿವಾರದಿಂದ ಬುಧವಾರದವರೆಗೆ ಬ್ಯಾಂಕುಗಳಿಗೆ ಸರಕಾರಿ ರಜೆ ಇದ್ದು, ಇಂದು ಬೆಳಗ್ಗೆ ಉದ್ಯೋಗಿಯೊಬ್ಬರು ಬ್ಯಾಂಕಿಗೆ ಆಗಮಿಸಿದ ಸಂದರ್ಭದಲ್ಲಿ ಬ್ಯಾಂಕಿನ ಹಿಂದುಗಡೆಯ ಕಿಟಕಿಯನ್ನು ಮುರಿದು ಕಳವಿಗೆ ಯತ್ನ ನಡೆದಿರುವ ಬಗ್ಗೆ ಗೊತ್ತಾಗಿದೆ. ರಜಾ ದಿನಗಳ ನಡುವೆ ಯಾರೋ ಕಳ್ಳರು ಕಿಟಕಿಯನ್ನು ಮುರಿದು ಒಳನುಗ್ಗಿದ್ದಾರೆ. ಅಲ್ಲಿದ್ದ ಸಿಸಿಟಿವಿಗೆ ಹಾನಿಗೊಳಿಸಿದ್ದಾರೆ. ಅಲ್ಲದೆ, ಕಳ್ಳರು ಸ್ಟ್ರಾಂಗ್ ರೂಂನ್ನು ಮುರಿಯಲು ವಿಫಲ ಯತ್ನ ನಡೆಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





