ಪಾಣೆಮಂಗಳೂರು ಹೋಬಳಿ ವ್ಯಾಪ್ತಿಯ ಕಂದಾಯ, ಪಿಂಚಣಿ ಅದಾಲತ್

ಬಂಟ್ವಾಳ, ಅ. 13: ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದಾಗ ಕಾರ್ಯಾಂಗ ವ್ಯವಸ್ಥೆ ಚುರುಕುಗೊಂಡು ಸರಕಾರಿ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ತಲುಪಲು ಸಾಧ್ಯ ಎಂದು ಬಂಟ್ವಾಳ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಹೇಳಿದರು.
ಮೆಲ್ಕಾರ್‌ನ ಬಿರ್ವ ಅಡಿಟೋರಿಯಂನಲ್ಲಿ ಗುರುವಾರ ನಡೆದ ಪಾಣೆಮಂಗಳೂರು ಹೋಬಳಿ ವ್ಯಾಪ್ತಿಯ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರಿಗಳು ಹಾಗೂ ಜನರ ನಡುವಿನ ಅಂತರವನ್ನು ಕಡಿಮೆ ಮಾಡಿ ಸರಕಾರಿ ಸವಲತ್ತುಗಳು ಜನರಿಗೆ ಸುಲದಲ್ಲಿ ತಲುಪಲು ಕಂದಾಯ ಅದಾಲತ್‌ಗಳಿಂದ ಸಾಧ್ಯ ಎಂದು ಹೇಳಿದರು.
ಮಂಗಳೂರು ಸಹಾಯಕ ಆಯುಕ್ತ ಆರ್.ಅಶೋಕ್ ಸಬಾಧ್ಯಕ್ಷತೆ ವಹಿಸಿ ಮಾತನಾಡಿ ಪಹಣಿ ಪತ್ರಗಳಲ್ಲಿ ಲೋಪದೋಷಗಳಿದ್ದಲ್ಲಿ ಅದನ್ನು ನಮ್ಮ ಗಮನಕ್ಕೆ ತಂದು ಕಂದಯ ಅದಾಲತ್ ಕಾರ್ಯಕ್ರಮಗಳ ಮೂಲಕ ಅವುಗಳನ್ನು ತಕ್ಷಣ ಸರಿಪಡಿಸಲು ಅವಕಾಶ ಇದೆ. ಕಂದಾಯ ಅದಾಲತ್ ಮೂಲಕ ಶೇ. 50ಕ್ಕಿಂತಲೂ ಹೆಚ್ಚಿನ ಕಡತಗಳನ್ನು ವಿಲೇ ಮಾಡಲಾಗಿದೆ. ಪ್ರತೀ ಗ್ರಾಮ ಹಾಗೂ ಹೋಬಳಿ ಮಟ್ಟದಲ್ಲಿ ಕಂದಾಯ ಅದಾಲತ್ ನಡೆಸಿ ಜನರ ಪಹಣಿ ಹಾಗೂ ಪಿಂಚಣಿ ಕಡತಗಳ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ ಎಂದರು.
ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಪಂ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ರವೀಂದ್ರ ಕಂಬಳಿ, ಎಂ.ಎಸ್.ಮುಹಮ್ಮದ್ ಮೊದಲಾದವರು ಮಾತನಾಡಿದರು.
ಜಿಪಂ ಸದಸ್ಯೆ ಕಮಲಾಕ್ಷಿ ಪೂಜಾರಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಸದಸ್ಯರಾದ ಸಂಜೀವ ಪೂಜಾರಿ, ಗಣೇಶ್ ಸುವರ್ಣ ತುಂಬೆ, ಯಶವಂತ ಪೊಳಲಿ, ಮಂಜುಳಾ, ಬೇಬಿ, ರತ್ನಾವತಿ, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಇರಾ ಗ್ರಾಪಂ ಅಧ್ಯಕ್ಷ ರರಝಾಕ್ ಇರಾ, ಸಜೀಪಮೂಡ ಗ್ರಾಪಂ ಅಧ್ಯಕ್ಷ ಗಣಪತಿ, ನರಿಂಗಾನ ಗ್ರಾಪಂ ಅಧ್ಯಕ್ಷ ಇಸ್ಮಾಯೀಲ್, ನರಿಕೊಂಬು ಗ್ರಾಪಂ ಅಧ್ಯಕ್ಷ ಯಶೋಧರ ಕರ್ಬೇಟ್ಟು, ಕರಿಯಂಗಳ ಗ್ರಾಪಂ ಉಪಾಧ್ಯಕ್ಷ ಚಂದ್ರಶೇಖರ, ಸಂಗಬೆಟ್ಟು, ಅಮ್ಮುಂಜೆ ಗ್ರಾಪಂ ಅಧ್ಯಕ್ಷರು, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿಫ್ರಿಯನ್ ಮಿರಾಂದ ವೇದಿಕೆಯಲ್ಲಿದ್ದರು.
ಕಂದಾಯ ಇಲಾಖೆಯ ಅಧಿಕಾರಿಗಳಾದ ರಾಮ, ದಿವಾಕರ, ತೌಫಿಕ್, ಎ.ಪಿ.ಟ್, ಬಸಪ್ಪ, ರಾಜಶೇಖರ, ಶಿವಪ್ಪ, ಪ್ರದೀಪ, ಜ್ಯೋತಿಬಾಯಿ, ಯೋಗಾನಂದ, ಮಮತಾ, ಪ್ರಶಾಂತ, ಸದಾನಂದ ಮತ್ತಿತರು ಹಾಜರಿದ್ದರು. ಕಾರ್ಯಕ್ರಮದಲ್ಲಿ 38 ಸಂಧ್ಯಾ ಸುರಕ್ಷಾ, 36 ವಿಧವಾ ವೇತನ, 12 ಅಂಗವಿಕಲ ವೇತನ, 7 ಮನಸ್ವಿನಿ ಹಾಗೂ ಇಬ್ಬರಿಗೆ ವಿಧವಾ ವೇತನ ಸೇರಿದಂತೆ 95 ಪಲಾನುವಿಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಪಹಣಿ ಪತ್ರದಲ್ಲಿನ ಲೋಪದೋಷಗಳ ಕುರಿತು ಪರಿಶೀಲನೆ ನಡೆಸಲಾಯಿತು.







