ಮುಂಬೈ ದಾಳಿ ಪ್ರಕರಣದ ವೇಳೆ ಬಾಂಬ್ ಪತ್ತೆಗೆ ಪೊಲೀಸರಿಗೆ ನೆರವಾಗಿದ್ದ ಶ್ವಾನ ಸೀಸರ‍್ ಸಾವು

ಮುಂಬೈ, ಆ.13: ಮುಂಬೈ ಮೇಲೆ 26/11 ಉಗ್ರರ ದಾಳಿಯ ವೇಳೆ ಉಗ್ರರು ಅಡಗಿಸಿಟ್ಟಿದ್ದ ಬಾಂಬ್ ಪತ್ತೆ ಹಚ್ಚುವಲ್ಲಿ ಪೊಲೀಸರಿಗೆ ನೆರವಾಗಿದ್ದ ಶ್ವಾನದಳದ ಸೀಸರ್ ಗುರುವಾರ ಮೃತಪಟ್ಟಿದೆ.
ಬಾಂಬ್ ಪತ್ತೆ ಮತ್ತು ಬಾಂಬ್ ನಿಷ್ಕ್ರಿಯದಳದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಿದ್ದ ನಾಲ್ಕು ಶ್ವಾನಗಳ ಪೈಕಿ ಬದುಕುಳಿದಿದ್ದ ಕೊನೆಯ ಶ್ವಾನ ಸೀಸರ್ ಕೊನೆಯುಸಿರೆಳೆದಿದೆ.
ಮ್ಯಾಕ್ಸ್, ಸುಲ್ತಾನ್, ಟೈಗರ್ ಮತ್ತು ಸೀಸರ್ ಶ್ವಾನಗಳು ಮುಂಬೈ ಮೇಲೆ ಉಗ್ರರ ದಾಳಿ ನಡೆಸಿದ ವೇಳೆ ಅವರು ಅಡಗಿಸಿಟ್ಟಿದ್ದ ಬಾಂಬ್ ನ್ನು ಪತ್ತೆ ಹಚ್ಚುವಲ್ಲಿ ಪೊಲೀಸರಿಗೆ ನೆರವಾಗಿತ್ತು.
ಸೇವೆಯಿಂದ ನಿವೃತ್ತಿ ಪಡೆದ ಬಳಿಕ ಮ್ಯಾಕ್ಸ್, ಟೈಗರ್ ,ಸುಲ್ತಾನ್, ಸೀಸರ್ ಎಂಬ ನಾಲ್ಕು ನಾಯಿಗಳನ್ನು ಮುಂಬೈನ ಪ್ರಾಣಿ ಸಂಘಟನಾ ಸದಸ್ಯೆ ಫಿಝಾ ಶಾ ಸಾಕುವ ಜವಾಬ್ದಾರಿ ತೆಗೆದುಕೊಂಡಿದ್ದರು. ಈ ಪೈಕಿ ಮೂರು ಶ್ವಾನಗಳು ಹಿಂದೆ ಮೃತಪಟ್ಟಿತ್ತು. ಸೀಸರ್ ಸಾವಿನಿಂದಾಗಿ ಒಂದು ವರ್ಷದೊಳಗೆ ಎಲ್ಲ ಶ್ವಾನಗಳು ಮೃತಪಟ್ಟಿದೆ. . ಟೈಗರ‍್ ಜು.23ರಂದು ಮೃತಪಟ್ಟಿತ್ತು. ಟೈಗರ್ ಸತ್ತ ಬಳಿಕ ಸೀಸರ‍್ ಮಂಕಾಗಿತ್ತು. ಸ್ನೇಹಿತನ ಸಾವಿನ ಕಾರಣದಿಂದಾಗಿ ಸೀಸರ್ ಖಿನ್ನತೆಗೊಳಗಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಸೀಸರ್‌ನನ್ನು ಉಳಿಸಲು ಸಾಧ್ಯವಾಗಲಿಲ್ಲ.





