ಯುನಿವೆಫ್: ನಾಳೆ ಚಿಂತನ-ಮಂಥನ ಕಾರ್ಯಕ್ರಮ
ಮಂಗಳೂರು, ಅ.13: ಯುನಿವೆಫ್ ಕರ್ನಾಟಕ ಆಯೋಜಿಸುತ್ತಿರುವ ಸರ್ವಧರ್ಮೀಯರ ಸ್ನೇಹ ಸಂವಾದ ಕಾರ್ಯಕ್ರಮದ ದಶಮಾನೋತ್ಸವ ಕಾರ್ಯಕ್ರಮವು ಅ.28ರಂದು ಸಂಜೆ 6:30ಕ್ಕೆ ಬಲ್ಮಠ ಮಿಷನ್ ಕಾಂಪೌಂಡ್‌ನಲ್ಲಿರುವ ಶಾಂತಿ ನಿಲಯದಲ್ಲಿ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಅ.15ರಂದು ಸಂಜೆ 4ಕ್ಕೆ ಪೂರ್ವಭಾವಿಯಾಗಿ ಮುಸ್ಲಿಮೇತರ ಬುದ್ಧಿಜೀವಿಗಳಿಗಾಗಿ ಭಾರತದಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆ ಅಗತ್ಯ ಹಾಗೂ ಔಚಿತ್ಯ ಎಂಬ ವಿಷಯದಲ್ಲಿ ಚಿಂತನ-ಮಂಥನ ಕಾರ್ಯಕ್ರಮವು ನಗರದ ಫಳ್ನೀರ್‌ನ ಇಂದಿರಾ ಆಸ್ಪತ್ರೆ ಬಳಿಯ ಲುಲು ಸೆಂಟರ್‌ನ ಮೊದಲ ಮಹಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





