‘ವಿ4’ನಲ್ಲಿ ಸ್ಕೂಲ್ ಆಫ್ ಕುರ್‌ಆನ್ ಪ್ರಸಾರ
ಮಂಗಳೂರು, ಅ.13: ಸಿಲ್‌ಸಿಲಾ ಮೀಡಿಯಾ ವತಿಯಿಂದ ‘ವಿ4’ ನ್ಯೂಸ್ ಟಿವಿ ಚಾನೆಲ್‌ನಲ್ಲಿ ಪ್ರತಿ ವಾರ ಪ್ರಸಾರಗೊಳ್ಳುವ ‘ಸ್ಕೂಲ್ ಆಫ್ ಕುರ್‌ಆನ್’ ಕಾರ್ಯಕ್ರಮದಲ್ಲಿ ಅ.14ರಿಂದ ‘ಸೂರತುಲ್ ಬಲದ್’ನ ವ್ಯಾಖ್ಯಾನ ಪ್ರಸಾರವಾಗಲಿದೆ.
ಪ್ರತಿ ಶುಕ್ರವಾರ ಅಪರಾಹ್ನ 2:30ಕ್ಕೆ ಪ್ರಸಾರಗೊಳ್ಳುವ ಈ ಕಾರ್ಯಕ್ರಮವು ಸೋಮವಾರ ಬೆಳಗ್ಗೆ 9ಕ್ಕೆ ಮರುಪ್ರಸಾರವಾಗಲಿದೆ ಎಂದು ಸಿಲ್‌ಸಿಲಾ ನಿರ್ದೇಶಕ ಪಿ.ಎಸ್.ಮುಹಮ್ಮದ್ ಕಾಮಿಲ್ ಸಖಾಫಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





