ಇಂದಿನ ಕಾರ್ಯಕ್ರಮಗಳು
ಅಪ್ಟಿಕಾನ್-2016: ಮಣಿಪಾಲ ವಿವಿಯ ಮಣಿಪಾಲ ಕಾಲೇಜ್ ಆಫ್ ಪಾರ್ಮಸ್ಯೂಟಿಕಲ್ ಸಯನ್ಸ್‌ನ ವತಿಯಿಂದ ಅಸೋಸಿಯೇಷನ್ ಆಫ್ ಫಾರ್ಮಸಿ ಟೀಚರ್ಸ್ ಆಫ್ ಇಂಡಿಯಾದ ಸ್ವರ್ಣಮಹೋತ್ಸವದ ಆಚರಣೆ ಹಾಗೂ 21ನೆ ಅಪ್ಟಿ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆ. ಸಮಯ: ಸಂಜೆ 7ಕ್ಕೆ. ಸ್ಥಳ: ಡಾ.ಟಿಎಂಎ ಪೈ ಸಭಾಂಗಣ, ಕೆಎಂಸಿ ಮಣಿಪಾಲ. ದಕ್ಷಿಣ ಭಾರತ ಯೋಗಾ ಕ್ರೀಡಾ ಸ್ಪರ್ಧೆ: ಯೋಗಾ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್‌ನಿಂದ ಮೊದಲ ದಕ್ಷಿಣ ಭಾರತ ಯೋಗ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ ಉದ್ಘಾಟನೆ. ಸಮಯ: ಪೂರ್ವಾಹ್ನ 11ಕ್ಕೆ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ, ಉಡುಪಿ. ಉದ್ಘಾಟನೆ: ನಗರದಲ್ಲಿ ಉಡುಪುಗಳ ಮಳಿಗೆ ‘ಗೀತಾಂಜಲಿ ಸಿಲ್ಕ್ಸ್’ನ ಉದ್ಘಾಟನೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ರಿಂದ. ಸಮಯ: ಸಂಜೆ 5ಕ್ಕೆ. ಸ್ಥಳ:ಗೀತಾಂಜಲಿ ಶಾಪರ್ ಸಿಟಿ, ಗೀತಾಂಜಲಿ ರಸ್ತೆ ಉಡುಪಿ. ನೃತ್ಯ ರೂಪಕೋತ್ಸವ: ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ನೃತ್ಯನಿಕೇತನ ಕೊಡವೂರು ರಜತಪಥ-ರಜತ ಮಹೋತ್ಸವ ಸಮಿತಿಯ ವತಿಯಿಂದ ನಡೆದಿರುವ ನೃತ್ಯ ರೂಪಕೋತ್ಸವ ಕಾರ್ಯಕ್ರಮದಲ್ಲಿ ಇಂದು ಚೆನ್ನೈ ಕಲಾಕ್ಷೇತ್ರದ ಪ್ರೊ.ಎಂ.ಜನಾರ್ದನ ನಿರ್ದೇಶನದಲ್ಲಿ ಬೆಂಗಳೂರಿನ ಗುರು ಪ್ರೊ.ಎಂ.ಆರ್.ಕೃಷ್ಣಮೂರ್ತಿ ಅವರ ಹಿರಿಯ ಶಿಷ್ಯರಿಂದ ‘ರಾಮಾಯಣ’. ಸಮಯ: ಸಂಜೆ 7ರಿಂದ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ ಉಡುಪಿ.
ಪೇಜಾವರ ಶ್ರೀಗಳ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಪೂರ್ವಾಹ್ನ 11ರಿಂದ ರಾಜಾಂಗಣದಲ್ಲಿ ಪ್ರಥಮ ದಕ್ಷಿಣ ಭಾರತ ಯೋಗ ಸ್ಪರ್ಧೆ, ಸಂಜೆ 5ಕ್ಕೆ ಚಂದ್ರಶಾಲೆ ಪುರಾಣ ಉಡುಪಿಯ ವಿದ್ವಾನ್ ಬ್ರಹ್ಮಣ್ಯತೀರ್ಥಾಚಾರ್ಯರಿಂದ ಪ್ರವಚನ, 5:45ಕ್ಕೆ ರಾಜಾಂಗಣದಲ್ಲಿ ಡಾ.ಗಣಪತಿ ಭಟ್ ಕಡಂದಲೆ ಇವರಿಂದ ಧಾರ್ಮಿಕ ಉಪನ್ಯಾಸ ಬಳಿಕ ಪೇಜಾವರ ಶ್ರೀಗಳಿಂದ ಅನುಗ್ರಹ ಸಂದೇಶ. ಸಂಜೆ 7ರಿಂದ ರಾಜಾಂಗಣದಲ್ಲಿ ನೃತ್ಯ ರೂಪಕೋತ್ಸವ.





