ಮನವಿ ತಳ್ಳಿಹಾಕಿದ ಹೈಕೋರ್ಟ್
ಟೆಲಿಫೋನ್ ತಂತಿ ಕಳೆದುಹೋದ ಪ್ರಕರಣ
ಮುಂಬೈ, ಅ.13: ಟೆಲಿಫೋನ್ ತಂತಿ ಕಳೆದುಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ತನಿಖೆಯ ವೇಳೆ ತಪ್ಪಿತಸ್ಥ ಎಂದು ಸಾಬೀತಾಗಿ ಬಲವಂತವಾಗಿ ನಿವೃತ್ತಿ ಪಡೆಯಬೇಕಾಗಿ ಬಂದ ಟೆಲಿಕಾಂ ಅಧಿಕಾರಿಯೋರ್ವರು ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.
ಪ್ರಕಾಶ್ ತ್ಯಾಗಿ ಎಂಬವರು ಮುಂಬೈ ಮಹಾನಗರ ಟೆಲಿಫೋನ್ ನಿಗಮದಲ್ಲಿ 1979ರಲ್ಲಿ ಜೂನಿಯರ್ ಟೆಲಿಕಾಂ ಅಧಿಕಾರಿಯಾಗಿ ನಿಯುಕ್ತಿಗೊಂಡಿದ್ದರು. 1988ರಲ್ಲಿ ಸುಮಾರು 600 ಮೀಟರ್‌ನಷ್ಟು ಟೆಲಿಫೋನ್ ತಂತಿಗಳನ್ನು ಹಾಕಲಾಗಿದೆ ಎಂದು ಇವರು ದಾಖಲೆಗಳಲ್ಲಿ ತೋರಿಸಿದ್ದರು. ಆದರೆ ತಂತಿಗಳನ್ನು ಅಳವಡಿಸಿರಲಿಲ್ಲ. 1988ರ ಫೆ.9ರಂದು ಇವರ ವಿರುದ್ಧ ಎಫ್‌ಐಆರ್ ದಾಖಲಿಸಿ ಇಲಾಖಾ ತನಿಖೆಗೆ ಆದೇಶಿಸಿದ್ದು ತನಿಖೆ ವೇಳೆ ಇವರು ಆರೋಪಿಯೆಂದು ಸಾಬೀತಾಗಿತ್ತು.1995ರಲ್ಲಿ ಇವರನ್ನು ಬಲವಂತ ಸೇವಾ ನಿವೃತ್ತಿಗೆ ಒಳಪಡಿಸಲಾಗಿತ್ತು.ಇದನ್ನು ಪ್ರಶ್ನಿಸಿ ತ್ಯಾಗಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
Next Story





