ಚಿನ್ನಾಭರಣ ವ್ಯಾಪಾರಿಯನ್ನು ದೋಚಿ ಗುಂಡಿಟ್ಟು ಹತ್ಯೆ

ಉನ್ನಾವ್ (ಉ.ಪ್ರ.),ಅ.14: ಇಲ್ಲಿಯ ಮೌರ್ವಾನ ಪ್ರದೇಶದಲ್ಲಿ ಕೆಲವು ದುಷ್ಕರ್ಮಿಗಳು ಚಿನ್ನಾಭರಣ ವ್ಯಾಪಾರಿಯೋರ್ವನನ್ನು ದೋಚಿ, ಆತನನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ.
ಮೌರ್ವಾನದ ಪಂಚಮಖೇಡಾ ಪ್ರದೇಶದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ತನ್ನ ಚಿನ್ನಾಭರಣ ಮಾರಾಟ ಮಳಿಗೆಯನ್ನು ಮುಚ್ಚಿ ಮನೆಗೆ ಮರಳುತ್ತಿದ್ದ ರಾಜಕುಮಾರ್ (35) ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಸುಲಿಗೆಗೆ ಮುಂದಾದಾಗ ಅವರು ಪ್ರತಿಭಟಿಸಿದ್ದರು. ಅವರನ್ನು ಗುಂಡಿಟ್ಟು ಹತ್ಯೆಗೈದ ಲೂಟಿಕೋರರು ಅವರ ಬಳಿಯಿದ್ದ ಚಿನ್ನಾಭರಣಗಳ ಬ್ಯಾಗ್‌ನೊಂದಿಗೆ ಪರಾರಿಯಾಗಿದ್ದಾರೆ ಎಂದು ಹೆಚ್ಚುವರಿ ಎಸ್ಪಿ ಹರದಯಾಳ್ ಸಿಂಗ್ ತಿಳಿಸಿದರು.
ಹಂತಕರ ಪತ್ತೆಗಾಗಿ ಬಲೆ ಬೀಸಲಾಗಿದ್ದು, ದೋಚಲಾಗಿರುವ ಚಿನ್ನಾಭರಣಗಳ ನಿಖರ ಮೌಲ್ಯ ಇನ್ನಷ್ಟೇ ಗೊತ್ತಾಗಬೇಕಿದೆ ಎಂದರು.
Next Story





