ಜಿಯೋಗೆ ಸಡ್ಡು ಹೊಡೆದ ಏರ್ ಟೆಲ್
ಗ್ರಾಹಕರಿಗೆ ನೀಡುತ್ತಿರುವ ‘ಕೊಡುಗೆ’ ಏನು?

ಮುಂಬೈ, ಅ.14: ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಪ್ರತಿ ತಿಂಗಳಿಗೆ 16 ಮಿಲಿಯನ್ ಹೊಸ ಬಳಕೆದಾರರನ್ನು ಸೇರಿಸಿ ಟೆಲಿಕಾಂ ಜಗತ್ತಿನಲ್ಲಿ ಪಾರಮ್ಯ ಮೆರೆಯಲು ಯತ್ನಿಸುತ್ತಿರುವಂತೆಯೇ ದೇಶದ ಅತಿ ದೊಡ್ಡ ಟೆಲಿಕಾಂ ಕಂಪೆನಿ ಏರ್ ಟೆಲ್ ತನ್ನ ವೈರ್ಡ್ ಬ್ರಾಡ್ ಬ್ಯಾಂಡ್ ನೆಟ್ ವರ್ಕನ್ನು ಮೇಲ್ದರ್ಜೆಗೇರಿಸುತ್ತಿದ್ದು ವಾಯ್ಸ್ ಮತ್ತು ಡಾಟಾ ದರಗಳನ್ನು ಕಡಿತಗೊಳಿಸಲಿದೆ.
ಹೊಸ ಬಳಕೆದಾರರನ್ನು ಆಕರ್ಷಿಸಲು ಏರ್ ಟೆಲ್ ಮೂರು ತಿಂಗಳುಗಳ ಅನಿಯಮಿತ ಡಾಟ ಉಚಿತವಾಗಿ ಒದಗಿಸಲಿದೆ. ಪ್ರಸಕ್ತ ರಿಲಯನ್ಸ್ ಜಿಯೋ ಕೇವಲ ಹೈಸ್ಪೀಡ್ ವೈರ್ ಲೆಸ್ ಇಂಟರ್ ನೆಟ್ ಹಾಗೂ ಅನಿಯಮಿತ ಉಚಿತ ಡಾಟಾವನ್ನು ಬಳಕೆದಾರರಿಗೆ ಡಿಸೆಂಬರ್ ತನಕ ಒದಗಿಸುತ್ತಿದೆ.
ತನ್ನ 60,000 ರೂ. ಕೋಟಿ ಪ್ರಾಜೆಕ್ಟ್ ಲೀಪ್ ಅನ್ವಯ ಏರ್ ಟೆಲ್ ವೆಕ್ಟರೈಸೇಶನ್ ತಂತ್ರಜ್ಞಾನವನ್ನು ಜಾರಿಗೊಳಿಸುತ್ತಿದ್ದು ಇದರಿಂದ ಅದು 100 ಎಂಬಿಪಿಎಸ್ ವೇಗದಲ್ಲಿ ಬ್ರಾಡ್ ಬ್ಯಾಂಡ್ ಒದಗಿಸುವ ಸಾಮರ್ಥ್ಯ ಹೊಂದಿದೆ. ತನ್ನ ಬಳಕೆದಾರರ ನಿವಾಸಗಳಲ್ಲಿರುವ ಮೋಡೆಮ್ ಗಳನ್ನು ಅದು ಒಂದುಸಲದ ವೆಚ್ಚ 1,000 ರೂ. ಪಾವತಿಸಿದಲ್ಲಿ ಬದಲಾಯಿಸಿ ಕೊಡುವುದೆಂದು ಕಂಪೆನಿ ಹೇಳಿದೆ. ವೈರ್ಡ್ ಬ್ರಾಂಡ್ ಬ್ಯಾಂಡ್ ವಲಯದಲ್ಲಿ ಇದು ಅತಿ ದೊಡ್ಡ ತಂತ್ರಜ್ಞಾನ ಉನ್ನತೀಕರಣವಾಗಿದೆ.
ಏರ್ ಟೆಲ್ ತನ್ನ ಗೃಹ ಬ್ರಾಂಡ್ ಬ್ಯಾಂಡ್ ಬಳಕೆದಾರರಿಗೆ ಮೂರು ಹೆಚ್ಚು ಯೋಜನೆಗಳನ್ನು ಜಾರಿಗೊಳಿಸಿದ್ದು, 'ಮೈ ಹೋಮ್ ರಿವಾರ್ಡ್ಸ್' ಯೋಜನೆಯನ್ವಯ ಪ್ರತಿ ಏರ್ ಟೆಲ್ ಸಬ್ ಸ್ಕ್ರಿಪ್ಶನ್ ಸರ್ವಿಸ್ ಗೆ ಕಂಪೆನಿ 5 ಜಿಬಿ ಹೆಚ್ಚುವರಿ ಡಾಟಾ ಒದಗಿಸಲಿದೆ.







