ಅರುಣಾಚಲ ಪ್ರದೇಶ:ಖಂಡು ನೇತೃತ್ವದ ಪಿಪಿಎ ಸರಕಾರಕ್ಕೆ ಬಿಜೆಪಿ ಸೇರ್ಪಡೆ
ಇಟಾನಗರ,ಅ.14: ಬಿಜೆಪಿಯು ಇಂದು ಮುಖ್ಯಮಂತ್ರಿ ಪೆಮಾ ಖಂಡು ನೇತೃತ್ವದ ಅರುಣಾಚಲ ಪ್ರದೇಶದ ಪಿಪಿಎ ಸರಕಾರವನ್ನು ಸೇರಲಿದೆ.
ಬಿಜೆಪಿ ನಾಯಕ ತಾಮಿಯೊ ತಾಗಾ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸ ಲಿದ್ದಾರೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ತಾಪಿರ್ ಗಾವೊ ಸುದ್ದಿಸಂಸ್ಥೆಗೆ ತಿಳಿಸಿ ದರು.
ಖಂಡು ಮತ್ತು ಕಾಂಗ್ರೆಸ್ನ ಇತರ 42 ಶಾಸಕರು ಪಕ್ಷಾಂತರ ಮಾಡಿ ಮಾಜಿ ಮುಖ್ಯಮಂತ್ರಿ ಕಾಲಿಖೊ ಪುಲ್ ಅವರ ಪ್ರಾದೇಶಿಕ ಪಕ್ಷ ಪಿಪಿಎ ಅನ್ನು ಸೇರಿದ ಸುಮಾರು ಒಂದು ತಿಂಗಳ ಬಳಿಕ ಈ ಮಹತ್ವದ ಮೈತ್ರಿ ಏರ್ಪಟ್ಟಿದೆ.
ಸೆಪ್ಟೆಂಬರ್ ಮಧ್ಯಭಾಗದಲ್ಲಿ 42 ಇತರ ಶಾಸಕರೊಂದಿಗೆ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದ ಖಂಡು, ರಾಜೀನಾಮೆ ಸರ್ವಾನುಮತದ ನಿರ್ಧಾರವಾಗಿದೆ. ರಾಜ್ಯದ ಜನರ ಆಕಾಂಕ್ಷೆಗಳು ಅತ್ಯಂತ ಪ್ರಾದೇಶಿಕವಾಗಿವೆ ಮತ್ತು ಪ್ರಾದೇಶಿಕ ಪಕ್ಷ ಮಾತ್ರ ಅವನ್ನು ಈಡೇರಿಸಬಲ್ಲುದು ಎಂದು ಹೇಳಿದ್ದರು.
Next Story