ಗೂಡಂಗಡಿಗೆ ಬೆಂಕಿ ಹಚ್ಚಿದ ಆರೋಪಿಯ ಬಂಧನ

ಕಾಸರಗೋಡು, ಅ.14: ಗೂಡಂಗಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮನ್ನಿಪ್ಪಾಡಿಯ ಆರ್. ಗಣೇಶ್ (23) ಎಂದು ಗುರುತಿಸಲಾಗಿದೆ.
ಈತ ಉಳಿಯತ್ತಡ್ಕದ ಸಲಾವುದ್ದೀನ್ ಎಂಬವರ ಗೂಡಂಗಡಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಯಾಗಿದ್ದಾನೆ.
ಬುಧವಾರ ರಾತ್ರಿ ಬೆಂಕಿ ಹಚ್ಚಲಾಗಿತ್ತು. ಸುಮಾರು ಎರಡು ಲಕ್ಷ ರೂ.ನಷ್ಟ ಉಂಟಾಗಿತ್ತು.
Next Story





