‘ಫ್ಯಾನ್ಸಿ ಮಾಲ್’ ಶುಭಾರಂಭ

ಮಂಗಳೂರು, ಅ. 14: ಕಂಕನಾಡಿಯ ಮಂಗಳೂರು ಗೇಟ್ ಕಟ್ಟಡದಲ್ಲಿ ನೂತನವಾಗಿ ಆರಂಭಿಸಲಾಗಿರುವ ‘ಫ್ಯಾನ್ಸಿ ಮಾಲ್’ ಶೋ ರೂಂ ಇಂದು ಶುಭಾರಂಭಗೊಂಡಿತು.
ತಕ್ವಾ ಮಸೀದಿಯ ಖತೀಬ್ ಹಾಫಿಝ್ ಅಬ್ದುರ್ರಹ್ಮಾನ್ ಕಾಮಿಲ್ ಸಖಾಫಿ ಶೋ ರೂಂನ್ನು ಉದ್ಘಾಟಿಸಿ ದುಆ ನೆರವೇರಿಸಿದರು. ಈ ಸಂದರ್ಭದಲ್ಲಿ ಹಾಫಿಝ್ ರಶೀದ್ ಸಖಾಫಿ, ಇಬ್ರಾಹೀಂ ಮುಸ್ಲಿಯಾರ್, ಮುಹಮ್ಮದ್ ಹನೀಫ್, ಮುಹಮ್ಮದ್ ಶಮೀರ್ ಯೂನುಸ್ ಅಹ್ಮದ್, ಮುಹಮ್ಮದ್ ಸಾಲಿಹ್ ಮತ್ತು ಅಮೀರ್ ಹುಸೇನ್ ಉಪಸ್ಥಿತರಿದ್ದರು.
ನೂತನವಾಗಿ ಉದ್ಘಾಟನೆಗೊಂಡಿರುವ ‘ಫ್ಯಾನ್ಸಿ ಮಾಲ್’ನಲ್ಲಿ ಆ್ಯಂಟಿಕ್ ಜ್ಯುವೆಲ್ಲರಿ, ಒನ್ ಗ್ರಾಂ ಪಾಲಿಶ್ ಜ್ಯುವೆಲ್, ಬ್ರೈಡಲ್ ಜ್ಯುವೆಲ್ ಸಹಿತ ಆಟಿಕೆ ಸಾಮಗ್ರಿಗಳು, ಕಾಸ್ಮೆಟಿಕ್ಸ್, ಬೆಲ್ಟ್ಸ್, ಸಾಫ್ಟ್ ಟಾಯ್ಸ್, ಸ್ಕೂಲ್ ಬ್ಯಾಗ್ಸ್, ಮಹಿಳಾ ಹ್ಯಾಂಡ್ ಬ್ಯಾಗ್, ಟಿಫನ್ ಬ್ಯಾಗ್ಸ್ ಮತ್ತು ವಾಟರ್ ಬಾಟಲ್‌ಗಳು ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.
Next Story





