ಮರು ಟೆಂಡರ್ ಪ್ರಕ್ರಿಯೆಗೆ ಒತಾ್ತಯ
ಮೂಡಿಗೆರೆ, ಅ.14: ಇಲ್ಲಿನ ಪಪಂ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯನ್ನು ಬೇಕಾದ ಗುತ್ತಿಗೆದಾರರಿಗೆ ಮಾತ್ರ ತಿಳಿಸಿ, ಟೆಂಡರ್ ಹಾಕಿಸಲಾಗುತ್ತಿದೆ ಎಂದು ವಿಎಚ್‌ಪಿ ಅಧ್ಯಕ್ಷ ಭರತ್ ಆರೋಪಿಸಿದರು.
ಅವರು ಪಪಂ ಆವರಣದಲ್ಲಿನ ನೋಟಿಸ್ ಬೋರ್ಡ್‌ನ್ನು ಸುದ್ದಿಗಾರರಿಗೆ ತೋರಿಸುತ್ತಾ ಮಾತನಾಡಿದರು.
ಯಾವುದೇ ಟೆಂಡರ್ ಪ್ರಕ್ರಿಯೆ ನಡೆಯುವಾಗ ಎಲ್ಲಾ ಇಲಾಖೆಗಳ ನೋಟಿಸ್ ಬೋರ್ಡ್‌ನಲ್ಲಿ ಟೆಂಡರ್ ಪ್ರಕ್ರಿಯೆ ಬಗ್ಗೆ ನೋಟಿಸು ಹಾಕಬೇಕು. ಅಲ್ಲದೆ ಪತ್ರಿಕೆಗಳಲ್ಲಿ ಜಾಹಿರಾತು ಹಾಕಬೇಕೆಂಬ ನಿಯಮವಿದೆ. ಆದರೆ, ಇಲ್ಲಿನ ಪಪಂ ಕಾರ್ಯಾಲಯದಿಂದ ನಡೆಯುವ ಟೆಂಡರ್ ಜಾಹಿರಾತನ್ನು ರಾಜ್ಯ ಮಟ್ಟದ ಪತ್ರಿಕೆಗಳಿಗೆ ನೀಡದೆ ಯಾರಿಗೂ ತಿಳಿಯಬಾರದೆಂದು, ತಮಗೆ ಬೇಕಾದ ಸ್ಥಳೀಯ ಪತ್ರಿಕೆಗೆ ಜಾಹಿರಾತನ್ನು ನೀಡಿದ್ದಾರೆ. ಪಪಂ ನೋಟಿಸ್ ಬೋರ್ಡ್‌ನಲ್ಲಿ ಶೃಂಗೇರಿ ಸೇರಿದಂತೆ ಬೇರೆ ತಾಲೂಕಿನ ಟೆಂಡರ್ ನೋಟಿಸನ್ನು ಹಾಕಲಾಗಿದೆ. ಇಲ್ಲಿ ನಡೆಯುವ ಕಾಮಗಾರಿಯ ಟೆಂಡರ್ ನೋಟಿಸು ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿದರು.
ಈ ಬಗ್ಗೆ ಮುಖ್ಯಾಧಿಕಾರಿಗಳು ಉತ್ತರ ನೀಡಬೇಕೆಂದು ಅವರ ಕೊಠಡಿಗೆ ತೆರಳಿದರು. ಮುಖ್ಯಾಧಿಕಾರಿ ಮಂಜುನಾಥ್ ಪಪಂ ಅಧ್ಯಕ್ಷರ ಕೊಠಡಿಗೆ ಸೇರಿಕೊಂಡವರು ಚೇಂಬರ್‌ಗೆ ಮರಳಿ ಬರಲಿಲ್ಲ.
ಇತ್ತ ಕಾದು ಕುಳಿತಿದ್ದ ಸಂಘಟನೆಯವರು ಮುಖ್ಯಾಧಿಕಾರಿಗಳು ಬಾರದೇ ಇದುದ್ದನ್ನು ಕಂಡು ರೋಸಿಹೋದರು.
ಈ ಟೆಂಡರ್ ಪಕ್ರಿಯೆಯನ್ನು ರದ್ದುಗೊಳಿಸಿ ನಿಯಮಾನುಸಾರವಾಗಿ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು. ಈ ವೇಳೆ ವಿಎಚ್‌ಪಿ ಕಾರ್ಯದರ್ಶಿ ಹುಲ್ಲೇಮನೆ ಚಂದ್ರು, ಬಿಜೆಪಿ ಎಸ್ಸೀ ಮೋರ್ಚಾದ ತಾಲೂಕು ಅಧ್ಯಕ್ಷ ಜಯಪಾಲ್ ಮತ್ತಿತರರು ಉಪಸ್ಥಿತರಿದ್ದರು.







