ಪೋಲಂಡ್‌ನ ಪರ್ವತಾರೋಹಿ ಸಾವು, ಇನ್ನೋರ್ವ ನಾಪತ್ತೆ
ಡೆಹ್ರಾಡೂನ್,ಅ.14: ಉತ್ತರಕಾಶಿ ಜಿಲ್ಲೆಯ ಹಿಮಾ ಲಯದ ಶಿವಲಿಂಗ ಶಿಖರವನ್ನು ಹತ್ತುವ ಮಾರ್ಗದಲ್ಲಿ 5,000 ಅಡಿಗೂ ಎತ್ತರದಲ್ಲಿ ಅನಾರೋಗ್ಯಕ್ಕೆ ಗುರಿಯಾಗಿ ಸಿಕ್ಕಿಹಾಕಿಕೊಂಡಿದ್ದ ಪೋಲಂಡ್‌ನ ಇಬ್ಬರು ಪರ್ವತಾ ರೋಹಿಗಳ ಪೈಕಿ ಓರ್ವ ಪ್ರಪಾತದಲ್ಲಿ ಬಿದ್ದು ಸಾವನ್ನಪ್ಪಿದ್ದರೆ, ಇನ್ನೋರ್ವ ನಾಪತ್ತೆಯಾಗಿದ್ದಾರೆ.
ಲುಕಾಝ್ ಜಾನ್ ಚ್ರಾನೊವಸ್ಕಿ ಮೃತ ಪರ್ವತಾರೋಹಿ. ಗುರುವಾರ ಸಂಜೆ ರಕ್ಷಣಾ ತಂಡವು ತನ್ನನ್ನು ತಲುಪಲು ಅನುಕೂಲವಾಗಲೆಂದು ಕೆಳಗಿಳಿದು ಬರಲು ಯತ್ನಿಸುತ್ತಿದ್ದ ಲುಕಾಝ್ ನಿತ್ರಾಣಗೊಂಡಿದ್ದರಿಂದ ಮುಗ್ಗರಿಸಿ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಅವರ ದೇಶದವರೇ ಆಗಿರುವ ಸ್ನೇಹಿತ ಗ್ರೆಝೆಗಾರ್ಝ್ ಮಿಖಾಯಿಲ್ ಕುಕುರೊವಸ್ಕಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಉತ್ತರಕಾಶಿ ಎಸ್‌ಪಿ ದದನ್ ಪಾಲ್ ಸುದ್ದಿಸಂಸ್ಥೆಗೆ ತಿಳಿಸಿದರು.
Next Story





