ಅಝರ್ ಅಲಿ ಅಜೇಯ ತ್ರಿಶತಕ
ಪಾಕಿಸ್ತಾನ 579/3 ಡಿಕ್ಲೇರ್

ದುಬೈ, ಅ.14: ವೆಸ್ಟ್‌ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಅಝರ್ ಅಲಿ(ಔಟಾಗದೆ 302) ತ್ರಿಶತಕದ ನೆರವಿನಿಂದ ಪಾಕಿಸ್ತಾನ ತಂಡ 3 ವಿಕೆಟ್ ನಷ್ಟಕ್ಕೆ 579 ರನ್ ಗಳಿಸಿ ಮೊದಲ ಇನಿಂಗ್ಸ್‌ನ್ನು ಡಿಕ್ಲೇರ್ ಮಾಡಿಕೊಂಡಿದೆ.
ಅಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಪಾಕ್‌ನ ನಾಲ್ಕನೆ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಹನೀಫ್, ಇಂಝಮಮ್ ಹಾಗೂ ಯೂನಿಸ್ ಖಾನ್ ಈ ಸಾಧನೆ ಮಾಡಿದ್ದರು. 469 ಎಸೆತಗಳನ್ನು ಎದುರಿಸಿದ್ದ ಅಲಿ 23 ಬೌಂಡರಿ, 2 ಸಿಕ್ಸರ್‌ಗಳನ್ನು ಬಾರಿಸಿದರು.
ಹಗಲು-ರಾತ್ರಿ ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾದ ಅಲಿ ಇನ್ನೋರ್ವ ಆರಂಭಿಕ ಆಟಗಾರ ಸಮಿ ಅಸ್ಲಾಂ(90)ರೊಂದಿಗೆ ಮೊದಲ ವಿಕೆಟ್‌ಗೆ 215 ರನ್ ಜೊತೆಯಾಟ ನಡೆಸಿ ಬೃಹತ್ ಮೊತ್ತಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಶಫೀಕ್ 67, ಆಝಂ 69 ರನ್ ಗಳಿಸಿ ಪಾಕ್ ಬೃಹತ್ ಮೊತ್ತ ದಾಖಲಿಸಲು ನೆರವಾದರು.
Next Story





