ಐಐಟಿಗಳಿಗೆ ಶುಲ್ಕ ನಿರ್ಧರಿಸುವ ಅಧಿಕಾರ?
ಹೊಸದಿಲ್ಲಿ, ಅ.14: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಗಳು ಇನ್ನು ಮುಂದೆ ತಮ್ಮದೇ ಆದ ಶುಲ್ಕ ನೀತಿಯನ್ನು ಹೊಂದಲು ಅವಕಾಶ ನೀಡುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ. ಇದುವರೆಗೆ ಐಐಟಿಗಳು ಶುಲ್ಕ ನೀತಿಯ ಬಗ್ಗೆ ಆಡಳಿತ ಮಂಡಳಿಯ ಅನುಮತಿ ಪಡೆಯುವ ಅಗತ್ಯವಿತ್ತು.
ಐಐಟಿಗಳ ಸ್ವಾಯತ್ತತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶುಲ್ಕ ಸ್ವರೂಪ ನಿರ್ಧರಿಸುವ ಅಧಿಕಾರವನ್ನು ಆಯಾ ಐಐಟಿಗಳಿಗೆ ನೀಡುವ ಕುರಿತು ಆಡಳಿತ ಮಂಡಳಿ ಶೀಘ್ರ ನಿರ್ಧಾರಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಎಲ್ಲಾ ಐಐಟಿಗಳೂ ಈ ಅವಕಾಶ ಪಡೆಯಲಿದೆಯೇ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿಲ್ಲ.
Next Story





