‘ವಿಶ್ವದಲ್ಲಿದಲಿತರಿಗೆ ಅತಿ ಹೆಚ್ಚುಹಕ್ಕುನೀಡಿರುವುದು ಭಾರತ’
ಕ್ರಾಂತಿ, ಆಂದೋಲನ ಅನಗತ್ಯ

ಬೆಂಗಳೂರು, ಅ.14: ಭಾರತದಲ್ಲಿ ದಲಿತರಿಗೆ ನೀಡಿರು ವಷ್ಟು ಹಕ್ಕುಗಳನ್ನು ವಿಶ್ವದ ಯಾವುದೇ ದೇಶದಲ್ಲಿ ನೀಡಲಾಗಿಲ್ಲ. ದಲಿತರು ತಮ್ಮ ಹಕ್ಕುಗಳನ್ನು ಪಡೆಯಲು ಯಾವುದೇ ಕ್ರಾಂತಿ ಅಥವಾ ಆಂದೋಲನ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಶುಕ್ರವಾರ ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ನಿವೃತ್ತ ಐಎಎಸ್ ಅಕಾರಿ ಹಾಗೂ ಛಲವಾದಿ ಮಹಾಸಭಾ ಅಧ್ಯಕ್ಷ ಕೆ.ಶಿವರಾಮ್ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ವನ್ನು ಉದ್ದೇಶಿಸಿ ಅವರು ಮಾತನಾಡಿದರು.
ದಲಿತ ಸಮುದಾಯವು ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಅವಿಭಾಜ್ಯ ಅಂಗ. ಅದಕ್ಕಾಗಿಯೇ ಸಂವಿಧಾನ ರಚನೆಕಾರರು ಅವರಿಗೆ ವಿಶೇಷ ಹಕ್ಕುಗಳನ್ನು ನೀಡಿದ್ದಾರೆ. ದಲಿತರ ಹಕ್ಕುಗಳಿಗೆ ಸಂವಿಧಾನದ ರಕ್ಷಣೆಯಿದೆ ಎಂದು ರಾಜನಾಥ್‌ಸಿಂಗ್ ಹೇಳಿದರು.
ದಲಿತ ಸಮುದಾಯದವರು ಸ್ವಾಭಿಮಾನಿಗಳಾಗಿ ಬದಕಲು ಅನುಕೂಲವಾಗುವಂತೆ ಕೇಂದ್ರ ಸರಕಾರವು ಮುದ್ರಾ ಯೋಜನೆಯನ್ನು ಜಾರಿಗೆ ತಂದಿದೆ. ಅಲ್ಲದೆ, ಪ್ರತಿ ತಿಂಗಳು ಕನಿಷ್ಠ ಒಬ್ಬ ದಲಿತ ಹಾಗೂ ಮಹಿಳೆಗೆ ಸ್ವಂತ ಉದ್ಯಮ ಸ್ಥಾಪನೆಗೆ ಸಾಲ ಸೌಲಭ್ಯ ಒದಗಿಸುವಂತೆ ಎಲ್ಲ ಬ್ಯಾಂಕುಗಳಿಗೆ ಕೇಂದ್ರ ಸರಕಾರ ಸೂಚನೆ ನೀಡಿದೆ ಎಂದು ಅವರು ಹೇಳಿದರು.
ಪ್ರಾಚೀನ ಭಾರತದಲ್ಲಿ ಅಸ್ಪಶ್ಯತೆ ಇರಲಿಲ್ಲ. ಆದರೆ, ನಮ್ಮನ್ನು ಆಳಿದವರು ಅದನ್ನು ಹೇರಿದ್ದಾರೆ. ಸಂತ ರವಿದಾಸ, ಜ್ಞಾನದೇವ, ಕಂಬನ್ ಸೇರಿದಂತೆ ಹಲವಾರು ಸಂತರು, ಮಹನೀಯರು ದಲಿತ ಸಮುದಾಯಕ್ಕೆ ಸೇರಿದವರಾ ಗಿದ್ದಾರೆ. ಭಾರತವನ್ನು ಸಶಕ್ತ, ಸ್ವಾಭಿಮಾನಿ, ಸ್ವಾವಲಂಬಿ ಯನ್ನಾಗಿ ಮಾಡಲು ಎಲ್ಲ ವರ್ಗದ ಜನರು ಒಗ್ಗಟ್ಟಾಗ ಬೇಕು ಎಂದು ರಾಜನಾಥ್‌ಸಿಂಗ್ ಕರೆ ನೀಡಿದರು.ಸ್ಪಶ್ಯತೆಯಿಂದಾಗಿ ಅಪಮಾನ, ಸಂಘರ್ಷವನ್ನು ಎದುರಿಸಿದ ಅಂಬೇಡ್ಕರ್ ಎಂದಿಗೂ ತಮ್ಮ ದೇಶಭಕ್ತಿ ಯಿಂದ ವಿಮುಖರಾಗಲಿಲ್ಲ. ಅಂಬೇಡ್ಕರ್ ದಲಿತರ ರಾಜಕೀಯ ಅಕಾರದ ಬಗ್ಗೆ ಮಾತನಾಡಿದರೆ, ಮಹಾತ್ಮ ಗಾಂ ಅವರ ಸಾಮಾಜಿಕ ಅಕಾರದ ಬಗ್ಗೆ ಹಾಗೂ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ದಲಿತರ ಆರ್ಥಿಕ ಸಶಕ್ತೀಕರಣದ ಬಗ್ಗೆ ಪ್ರತಿಪಾದನೆ ಮಾಡಿದರು. ಪ್ರಧಾನಿ ನರೇಂದ್ರಮೋದಿ ನಮ್ಮ ಸರಕಾರವನ್ನು ಬಡವರಿಗೆ ಅರ್ಪಣೆ ಮಾಡಿದ್ದಾರೆ ಎಂದು ಹೇಳಿದರು.
ದಲಿತ ಸಮುದಾಯದ ರಾಜ್ಯದ ನಿವೃತ್ತ ಐಎಎಸ್ ಅಕಾರಿಯೊಬ್ಬರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ. ಅದಕ್ಕಾಗಿ ನೀವು ಬೆಂಗಳೂರಿಗೆ ಬರಬೇಕು ಎಂದು ಯಡಿ ಯೂರಪ್ಪ, ಕೇಂದ್ರ ಸಚಿವರಾದ ಅನಂತ್‌ಕುಮಾರ್, ಸದಾನಂದಗೌಡ ಕೆಲವು ದಿನಗಳ ಹಿಂದಷ್ಟೆ ನನಗೆ ಹೇಳಿದರು. ಅವರ ಆಹ್ವಾನವನ್ನು ತಕ್ಷಣ ಒಪ್ಪಿಕೊಂಡು ಇಲ್ಲಿಗೆ ಬಂದಿದ್ದೇನೆ ಎಂದು ಅವರು ತಿಳಿಸಿದರು.ಂಬೇಡ್ಕರ್ ಇಂದು(ಅ.14ರಂದು) ಬೌದ್ಧಧರ್ಮ ಸ್ವೀಕರಿಸಿದ ದಿನ. ಬೌದ್ಧ ಧರ್ಮವು ನಮ್ಮ ದೇಶದ ಮಣ್ಣಿನೊಂದಿಗೆ ಬೆರೆತ ಧರ್ಮ. ಶಾಂತಿ, ಸಹೋದರತೆ, ಸಹಬಾಳ್ವೆಯನ್ನು ಪ್ರತಿಪಾದನೆ ಮಾಡುವ ಧರ್ಮ ಎಂದು ರಾಜನಾಥ್‌ಸಿಂಗ್ ಹೇಳಿದರು.
ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಕೆ.ಶಿವರಾಮ್ ಇಂದಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳ ಬೇಕು. ರಾಜ್ಯದ ಎಲ್ಲ ಜಿಲ್ಲೆಗಳು, ತಾಲೂಕುಗಳು, ಗ್ರಾಮಗಳಿಗೆ ತೆರಳಿ ಬಿಜೆಪಿಯ ತತ್ವ, ಸಿದ್ಧಾಂತಗಳನ್ನು ಜನರಿಗೆ ತಿಳಿಸಬೇಕು. ಆ ಮೂಲಕ ನಮ್ಮ ಸರಕಾರಕ್ಕೆ ತಳಮಟ್ಟದಿಂದ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.
ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ.ಸದಾನಂದಗೌಡ, ಸಂಸದ ಪಿ.ಸಿ. ಮೋಹನ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಳಾದ ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಶಾಸಕರಾದ ಸುರೇಶ್‌ಕುಮಾರ್, ವಿ.ಸೋಮಣ್ಣ, ಗೋ.ಮದುಸೂಧನ್, ಡಿ.ಎಸ್.ವೀರಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಮುಖ ನಾಯಕರ ಗೈರು
ಬಿಜೆಪಿ ಕೋರ್ ಕಮಿಟಿ ಸದಸ್ಯರಾದ ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಸಂಸದ ಪ್ರಹ್ಲಾದ್‌ಜೋಶಿ, ಮಾಜಿ ಡಿಸಿಎಂ ಆರ್.ಅಶೋಕ್, ಗೋವಿಂದ ಕಾರಜೋಳ, ನಳಿನ್‌ಕುಮಾರ್ ಕಟೀಲ್, ಸಿ.ಎಂ.ಉದಾಸಿ ಸೇರಿದಂತೆ ಇನ್ನಿತರ ಪ್ರಮುಖ ನಾಯಕರ ಗೈರು ಎದ್ದು ಕಾಣುತ್ತಿತ್ತು.







