ಪಾಕಿಸ್ತಾನದಲ್ಲಿನ ಉಗ್ರವಾದ ನಿರ್ಮೂಲನೆಗೆ ನೆರವು: ರಾಜನಾಥ್‌ಸಿಂಗ್
ಬೆಂಗಳೂರು, ಅ.14: ಪಾಕಿಸ್ತಾನದಲ್ಲಿನ ಉಗ್ರವಾದ ವನ್ನು ನಿರ್ಮೂಲನೆ ಮಾಡಲು ಭಾರತ ಸರಕಾರ ಅಗತ್ಯವಾದ ನೆರವು ನೀಡಲು ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಬಸವಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಸಮಾರಂಭ ದಲ್ಲಿ ನಿವೃತ್ತ ಐಎಎಸ್ ಅಕಾರಿ ಹಾಗೂ ಛಲವಾದಿ ಮಹಾಸಭಾ ಅಧ್ಯಕ್ಷ ಕೆ.ಶಿವರಾಮ್‌ಗೆ ಬಿಜೆಪಿ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರ ಮಾಡಿಕೊಂಡ ಬಳಿಕ ಅವರು ಮಾತನಾಡಿದರು.್ರವಾದಕ್ಕೆ ಪೋಷಣೆ ನೀಡುತ್ತಿರುವುದರಿಂದ ಪಾಕಿಸ್ತಾನವು ಜಗತ್ತಿನಲ್ಲಿ ಏಕಾಂಗಿಯಾಗಿ ನಿಂತಿದೆ. ಪಾಕಿಸ್ತಾನ ಸರಕಾರಕ್ಕೆ ತನ್ನ ಸ್ವಂತ ಶಕ್ತಿ, ಸಾಮರ್ಥ್ಯ ದಿಂದ ಉಗ್ರವಾದ ಮಟ್ಟಹಾಕಲು ಸಾಧ್ಯವಿಲ್ಲದಿದ್ದರೆ, ನಮ್ಮ ಬಳಿ ನೆರವು ಕೇಳಲಿ. ಉಗ್ರವಾದ ನಿರ್ಮೂಲ ನೆಗೆ ನಾವು ನೆರವು ನೀಡಲು ಸಿದ್ಧರಿದ್ದೇವೆ ಎಂದು ರಾಜನಾಥ್‌ಸಿಂಗ್ ತಿಳಿಸಿದರು.
ನಮ್ಮ ಸ್ನೇಹಿತರು ಬದಲಾಗಬಹುದು. ಆದರೆ, ನೆರೆಹೊರೆಯವರು ಬದಲಾಗುವುದಿಲ್ಲ ಎಂದು ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಹೇಳುತ್ತಿದ್ದರು. ನಾವು ನಮ್ಮ ನೆರೆಹೊರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವಿರಿಸಿಕೊಳ್ಳಲು ಬಯಸುತ್ತೇವೆ. ಆದುದ ರಿಂದಲೇ, ಪ್ರಧಾನಿ ನರೇಂದ್ರಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಲ್ಲ ನೆರೆಹೊರೆಯ ರಾಷ್ಟ್ರಗಳ ಮುಖ್ಯಸ್ಥರಿಗೆ ಆಹ್ವಾನ ನೀಡಲಾಗಿತ್ತು ಎಂದರು.
ನಮ್ಮ ಪ್ರಯತ್ನವನ್ನು ಪಾಕಿಸ್ತಾನದ ಸರಕಾರ ಅರ್ಥ ಮಾಡಿಕೊಳ್ಳಲಿಲ್ಲ. ನಮಗೆ ಅಲ್ಲಿನ ನಾಗರಿಕರ ಮೇಲೆ ಯಾವುದೇ ದ್ವೇಷವಿಲ್ಲ. ಆದರೆ, ಪಾಕಿಸ್ತಾನ ಪೋಷಿಸುತ್ತಿರುವ ಉಗ್ರವಾದದ ವಿರುದ್ಧ ಮಾತ್ರ ದ್ವೇಷವಿದೆ ಎಂದು ರಾಜನಾಥ್‌ಸಿಂಗ್ ತಿಳಿಸಿದರು.
ಭಯೋತ್ಪಾದಕರು ನಮ್ಮ ನೆಲಕ್ಕೆ ನುಗ್ಗಿ 18 ಮಂದಿ ಯೋಧರನ್ನು ಹತ್ಯೆ ಮಾಡಿದರು. ಕೇಂದ್ರ ಸರಕಾರ ಏನೂ ಮಾಡದೆ ಸುಮ್ಮನೆ ಕೂತಿದೆ ಎಂದು ಹಲವರು ಟೀಕಿಸಿದರು. ಆದರೆ, ನಮ್ಮ ಸೈನಿಕರು ತಮ್ಮ ಶೌರ್ಯ, ಪರಾಕ್ರಮದ ಮೂಲಕ ಭಾರತ ಬಲಹೀನ ರಾಷ್ಟ್ರವಲ್ಲ ಶಕ್ತಿಶಾಲಿ ರಾಷ್ಟ್ರ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿದರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶ ವಿಭಜನೆಯಾದಾಗ ಪಾಕಿಸ್ತಾನ ತನ್ನನ್ನು ಇಸ್ಲಾಮಿಕ್ ರಾಷ್ಟ್ರವೆಂದು ಘೋಷಿಸಿಕೊಂಡಿತು. ಆದರೆ, ನಮ್ಮ ದೇಶವು ಜಾತ್ಯತೀತ ರಾಷ್ಟ್ರವಾಗಿ ಉಳಿದು ಕೊಂಡಿತು. ಇಡೀ ವಿಶ್ವಕ್ಕೆ ‘ವಸುದೈವ ಕುಟುಂಬಕಂ’ ಎಂಬ ಸಂದೇಶವನ್ನು ಸಾರಿದ ದೇಶ ನಮ್ಮದು. ಜಾತಿ, ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯಕ್ಕೆ ನಮ್ಮಲ್ಲಿ ಅವಕಾಶವಿಲ್ಲ. ನಮ್ಮ ಸರಕಾರವು ಯಾವುದೆ ಕಾರಣಕ್ಕೂ ಭಾರತೀಯರು ತಲೆತಗ್ಗಿಸುವ ಕೆಲಸವನ್ನು ಮಾಡುವುದಿಲ್ಲ ಎಂದು ಅವರು ಭರವಸೆ ನೀಡಿದರು.
ಮೋದಿ ಕೇವಲ ಎರಡೂವರೆ ವರ್ಷಗಳಲ್ಲಿ ಉನ್ನತ ಸ್ತರದಲ್ಲಿದ್ದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂ ಲನೆ ಮಾಡಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಾರತವು ವಿಶ್ವದ ಎದುರು ತಲೆ ಎತ್ತಿ ನಿಲ್ಲುವಂತೆ ನಮ್ಮ ಸರಕಾರ ಮಾಡಿದೆ ಎಂದು ಹೇಳಿದರು.







