ರಾಜಕಾಲುವೆ ಒತ್ತುವರಿ; ನಟ ದರ್ಶನ್, ಶಾಮನೂರುಗೆ ನೋಟಿಸ್
7 ದಿನಗಳ ಒಳಗೆ ಮನೆ, ಆಸ್ಪತ್ರೆತೆರವಿಗೆ ಗಡುವು

ಬೆಂಗಳೂರು, ಅ. 14: ರಾಜಕಾಲುವೆ ಒತ್ತುವರಿ ಮಾಡಿ ಮನೆ ನಿರ್ಮಿಸಿರುವುದು ದಾಖಲೆಗಳ ಪರಿಶೀಲನೆ ಖಚಿತವಾಗಿರುವ ಹಿನ್ನೆಲೆಯಲ್ಲಿ ಚಿತ್ರನಟ ದರ್ಶನ್ ಮನೆ ಮತ್ತು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮಾಲಕತ್ವದ ಎಸ್.ಎಸ್. ಆಸ್ಪತ್ರೆ ಯನ್ನು ಏಳು ದಿನಗಳ ಒಳಗೆ ತೆರವುಗೊಳಿಸಲು ನೋಟಿಸ್ ಜಾರಿ ಮಾಡಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಕಾರಿ ವಿ.ಶಂಕರ್ ತಿಳಿಸಿದ್ದಾರೆ.
ಶುಕ್ರವಾರ ಮಾಧ್ಯಮ ಪ್ರತಿನಿಗಳ ಜತೆ ಮಾತನಾಡಿದ ಅವರು, ನಟ ದರ್ಶನ್ ನಿವಾಸ, ಎಸ್‌ಎಸ್. ಆಸ್ಪತ್ರೆ ಮತ್ತು ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ 67 ಕಟ್ಟಡಗಳನ್ನು ರಾಜ ಕಾಲುವೆ ಒತ್ತುವರಿ ಮಾಡಿ ನಿರ್ಮಿಸಲಾಗಿದೆ. ಆ ಎಲ್ಲ ಕಟ್ಟಡ ಗಳನ್ನು ಏಳು ದಿನಗಳ ಒಳಗೆ ತೆರವು ಮಾಡಬೇಕೆಂದು ಸೂಚಿ ಸಲಾಗಿದೆ ಎಂದರು.
ರಾಜಕಾಲುವೆ ಒತ್ತುವರಿದಾರರಿಗೆ ಅ. 17ಕ್ಕೆ ತುರ್ತು ನೋಟಿಸ್ ಜಾರಿಗೆ ವಿಶೇಷ ಜಿಲ್ಲಾಕಾರಿಗಳಿಗೆ ಸೂಚಿಸಿದ್ದು, ಅವರು ಕೂಡಲೇ ನೋಟಿಸ್ ನೀಡಲಿದ್ದಾರೆ. ಆ ಬಳಿಕ ಏಳು ದಿನದೊಳಗೆ ಎಲ್ಲರೂ ಮನೆ, ಕಟ್ಟಡವನ್ನು ಖಾಲಿ ಮಾಡಬೇಕು. ಆ ಬಳಿಕ ಎಲ್ಲ ಆಸ್ತಿಯನ್ನು ರಾಜ್ಯ ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ದಕ್ಷಿಣ ತಹಶೀಲ್ದಾರ್ ಶಿವಕುಮಾರ್, ಭೂ ಒತ್ತುವರಿದಾರರಿಗೆ ಈ ಹಿಂದೆ ಒತ್ತುವರಿಗೆ ಸಂಬಂಸಿ ಈಗಾ ಗಲೇ ನೋಟಿಸ್ ನೀಡಿದ್ದಾರೆ. ಅವರು ಉತ್ತರವನ್ನೂ ನೀಡಿ ದ್ದಾರೆ. ಇದಕ್ಕೆ ಸಂಬಂಸಿದಂತೆ ತಹಶೀಲ್ದಾರ್ ವರದಿ ನೀಡಬೇಕಾಗಿದ್ದು, ಆನಂತರ ಕೆಎಲ್‌ಆರ್ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.್ರಮಿನಲ್ ಮೊಕದ್ದಮೆ: ರಾಜಕಾಲುವೆ ಒತ್ತುವರಿ ಮಾಡಿ ಐಡಿಯಲ್ ಹೋಮ್ಸ್ ಬಡಾವಣೆ ನಿರ್ಮಿಸಲಾಗಿದೆ. ಈ ಬಡಾವಣೆ ನಿರ್ಮಾಣಕ್ಕೆ ಬಿಡಿಎಯಿಂದ ಅಕ್ರಮವಾಗಿ ನಕ್ಷೆ ಮಂಜೂರು ಮಾಡಿಸಿಕೊಂಡಿದ್ದಾರೆ. ಈ ಸಂಬಂಧ ಬಡಾವಣೆ ನಿರ್ಮಾಣ ಗಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾ ಗುವುದು ಎಂದು ಅವರು ಮಾಹಿತಿ ನೀಡಿದರು.







