ಬುಡಕಟ್ಟುಜನಾಂಗಕ್ಕೆಪೌಷ್ಟಿಕ ಆಹಾರ ಯೋಜನೆ: ಸಚಿವ ಎಚ್.ಆಂಜನೇಯ

ಬೆಂಗಳೂರು, ಅ.14: ರಾಜ್ಯದಲ್ಲಿನ ಬುಡಕಟ್ಟು ಜನಾಂಗದಲ್ಲಿ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಹಾಡಿಗಳಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ಜೂನ್‌ನಿಂದ ನವೆಂಬರ್ ವರೆಗೆ ಮಳೆಗಾಲದಲ್ಲಿ ಆರು ತಿಂಗಳ ಕಾಲ ಪೌಷ್ಟಿಕ ಆಹಾರ ನೀಡುವ ಯೋಜನೆ ವ್ಯಾಪ್ತಿಗೆ ಚಿಕ್ಕಮಗಳೂರು ಜಿಲ್ಲೆಯನ್ನು ಸೇರಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣ ದಲ್ಲಿ ಸುದ್ದಿ ಗೋಷ್ಠ್ಟಿಯಲ್ಲಿ ಮಾತನಾಡಿದ ಅವರು, ಪ್ರತೀ ಕುಟುಂಬಕ್ಕೆ 15 ಕೆ.ಜಿ. ಅಕ್ಕಿ, 5 ಕೆ.ಜಿ. ತೊಗರಿ ಬೇಳೆ, 5 ಕೆ.ಜಿ. ಹೆಸರುಬೇಳೆ, 4 ಕೆ.ಜಿ. ಸಕ್ಕರೆ, 2 ಲೀಟರ್ ಅಡುಗೆ ಎಣ್ಣೆ, 45ಮೊಟ್ಟೆ ಹಾಗೂ 500 ಗ್ರಾಂ.ನಂದಿನಿ ತುಪ್ಪ ನೀಡಲಾ ಗುವುದು. ಪ್ರತೀ ತಿಂಗಳು ಒಂದು ಕುಟುಂಬಕ್ಕೆ 2,437.52 ರೂ. ವೆಚ್ಚವಾಗಲಿದ್ದು, ಈ ಯೋಜನೆಗೆ 6.77 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದರು.
ತಾನು ಈ ಹಿಂದೆ ಗ್ರಾಮ ವಾಸ್ತವ್ಯದ ವೇಳೆ ಬುಡಕಟ್ಟು ಜನಾಂಗದ ವಾಸ್ತವ ಪರಿಸ್ಥಿತಿ ಅರಿತು ಈ ಯೋಜನೆ ರೂಪಿಸಲಾ ಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದನಕ್ಕಿಹರ ಹಾಡಿಯಲ್ಲಿ 4,634 ಗೌಡ್ಲು ಮತ್ತು ಅಲಕಲು ಬುಡಕಟ್ಟು ಜನಾಂಗದ ಕುಟುಂಬ ಗಳಿವೆ ಎಂದು ಅವರು ತಿಳಿಸಿದರು.ಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಮತ್ತು ಉಡುಪಿ ಜಿಲ್ಲೆಗಳ 46,796 ಕುಟುಂಬಗಳಿಗೆ ಪೌಷ್ಟಿಕ ಆಹಾರ ಯೋಜನೆಯನ್ನು 56 ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಒಟ್ಟು 51,430 ಜನರಿಗೆ ಒಟ್ಟು 62.77 ಕೋಟಿ ರೂ.ವೆಚ್ಚವಾಗಲಿದೆ ಎಂದರು.
ಅಲ್ಲದೆ, ಬುಡಕಟ್ಟು ಜನರ ವಾಸದ ಮನೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು 100 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಪ್ಯಾಕೇಜ್ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ನಾಲ್ಕು ವರ್ಷಗಳಲ್ಲಿ ಪರಿಶಿಷ್ಟ ವರ್ಗದವರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿ ಸೇರಿ ಮೂಲಸೌಲಭ್ಯ ಕಲ್ಪಿಸಲು 4,357 ಕೋಟಿ ರೂ. ವೆಚ್ಚ ಮಾಡಿದ್ದು, ಸರಕಾರದ ಹೊಸ ಸಾಧನೆ ಎಂದ ಅವರು, 105 ವಾಲ್ಮೀಕಿ ಭವನಗಳನ್ನು 125 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.
‘ಬುಡಕಟ್ಟು ಜನಾಂಗದ ಪ್ರತೀ ಕುಟುಂಬಕ್ಕೆ 15 ಕೆ.ಜಿ. ಅಕ್ಕಿ, 5 ಕೆ.ಜಿ. ತೊಗರಿಬೇಳೆ, 5 ಕೆ.ಜಿ. ಹೆಸರುಬೇಳೆ, 4 ಕೆ.ಜಿ. ಸಕ್ಕರೆ, 2 ಲೀಟರ್ ಅಡುಗೆ ಎಣ್ಣೆ, 45 ಮೊಟ್ಟೆ ಹಾಗೂ 500 ಗ್ರಾಂ.ನಂದಿನಿ ತುಪ್ಪ ನೀಡಲಾಗುವುದು. ಬುಡಕಟ್ಟು ಜನಾಂಗದ ಪೌಷ್ಟಿಕ ಆಹಾರ ಯೋಜನೆಗೆ ಒಟ್ಟು 62.77 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ’







