ನಾಳೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ
ಉಕ್ಕಿನ ಸೇತುವೆ ನಿರ್ಮಾಣಕ್ಕೆ ವಿರೋಧ

ಬೆಂಗಳೂರು, ಅ.14: ನಗರದ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಮೇಲ್ಸೇತುವೆ ಯೋಜನೆಯನ್ನು ಖಂಡಿಸಿ ಉಕ್ಕಿನ ಮೇಲ್ಸೇತುವೆ ವಿರೋ ನಾಗರಿಕ ಬಳಗದಿಂದ ಅ.16 ರಂದು ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ನಾಲ್ಕು ಸ್ಥಳಗಳಲ್ಲಿ ಮಾನವ ಸರಪಳಿ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಸದಸ್ಯ ಪ್ರಕಾಶ್ ಬೆಳವಾಡಿ, ಸರಕಾರ ತರಾತುರಿಯಲ್ಲಿ ಜಾರಿ ಮಾಡಲು ಮುಂದಾ ಗಿರುವ ಈ ಉಕ್ಕಿನ ಸೇತುವೆ ಪ್ರಸ್ತಾವನೆಯನ್ನು ಜಾರಿ ಮಾಡುವ ಮೊದಲು ಸಾರ್ವ ಜನಿಕರ ಅಭಿಪ್ರಾಯಗಳನ್ನು ಪಡೆಯದೇ ಏಕಾಏಕಿ ಜಾರಿ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು. ಸರಕಾರ ಸೇತುವೆ ನಿರ್ಮಾಣ ಸಂಬಂಧ ವರದಿ ಸಿದ್ಧಪಡಿಸಿ 1,300 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಸಿದ್ಧಪಡಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಇದೀಗ 1,791 ಕೋಟಿಗೆ ಪರಿಷ್ಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇಷ್ಟು ಬೃಹತ್ ಮೊತ್ತದಲ್ಲಿ ನಿರ್ಮಿಸುತ್ತಿರುವ ಸೇತುವೆ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ಮಾಡದೆ ಜಾರಿ ಮಾಡಲು ಮುಂದಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ ಎಂದು ಹೇಳಿದರು. ನಗರದಲ್ಲಿ ಎಲ್ಲ ಸ್ಥಳಗಳಲ್ಲಿಯೂ ಟ್ರಾಫಿಕ್ ಸಮಸ್ಯೆ ಇದೆ. ಆದರೆ, ಕೇವಲ 6.7 ಕಿ.ಮೀ.ಗೆ ಮಾತ್ರ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲು ಎರಡು ಸಾವಿರ ಕೋಟಿರೂ. ವೆಚ್ಚ ಮಾಡಬೇಕಾದ ಅಗತ್ಯವಿದೆಯಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಂತಹ ಸಂದರ್ಭದಲ್ಲಿ ಕಾಂಕ್ರಿಟ್ ಸೇತುವೆ ನಿರ್ಮಾಣ ಮಾಡುವುದರಿಂದ ಕಡಿಮೆ ಖರ್ಚು ಆಗುತ್ತದೆ. ಆದರೆ, ಉಕ್ಕಿನ ಸೇತುವೆ ನಿರ್ಮಾಣ ಮಾಡುವುದರಿಂದ ಪದೇ ಪದೇ ನಿರ್ವ ಹಣೆಗಾಗಿ ಕೋಟ್ಯಂತರ ರೂ. ವ್ಯರ್ಥವಾಗಿ ಪೋಲಾಗುತ್ತದೆ ಎಂದು ಹೇಳಿದರು. ನ ಸೇತುವೆ ನಿರ್ಮಾಣಕ್ಕೆ ನಗರದ ಸಾರ್ವಜನಿಕರು, ಜನಪ್ರತಿನಿಗಳು, ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿದ್ದರೂ ಮೊಂಡುತನವನ್ನು ಬಿಡದೇ ಮುಂದು ವರಿದಿರುವುದು ಸರಿಯಲ್ಲ. ಆದುದರಿಂದ ಶಾಸಕರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ನೇಮಕ ಮಾಡಿ, ಚರ್ಚಿಸಿ ಸಲಹೆ ನೀಡಿ. ನಂತರ ಅದನ್ನು ಸಾರ್ವಜನಿಕರ ಮುಂದಿಟ್ಟು ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.





