ಮುಖ್ಯಮಂತ್ರಿಗೆ ಸುರೇಶ್ ಕುಮಾರ್ ಪತ್ರ

ಬೆಂಗಳೂರು, ಅ.14: ಸಾರ್ವಜನಿಕರ ವಿರೋಧವನ್ನು ಕ್ಕರಿಸಿ ನಗರದಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಮಾಡಿದರೆ ಕಾಂಗ್ರೆಸ್ ಸರಕಾರ ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಉಕ್ಕಿನ ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ಉ್ಕಕಿನ ಸೇತುವೆ ವಿರೋಸಿ ರವಿವಾರ ವಿವಿಧ ಸಂಘ-ಸಂಸ್ಥೆಗಳು ಬೃಹತ್ ಮಾನವ ಸರಪಳಿ ನಿರ್ಮಿಸಿ ನಡೆಸುತ್ತಿ ರುವ ಪ್ರತಿಭಟನೆಯನ್ನು ಸರಕಾರ ನಿರ್ಲಕ್ಷಿಸಿದರೆ, ಬರುವ ದಿನಗಳಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ವಿವಿಧ ನಾಗರಿಕ ಸಂಘಟನೆಗಳು ಆರೋಪಿಸಿರುವಂತೆ ಉದ್ದೇಶಿತ ಈ ಉ್ಕಕಿನ ಸೇತುವೆ ನಿರ್ಮಾಣದ ಹಿಂದೆ ಹಿಡನ್ ಅಜೆಂಡಾ ಇದೆ. ಗುತ್ತಿಗೆದಾರರ ಅನುಕೂಲಕ್ಕಾಗಿ ಮತ್ತು ಚುನಾವಣೆಗೆ ಹಣ ಕ್ರೋಡೀಕರಿಸುವ ಉದ್ದೇಶದಿಂದ ನಗರದಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಮಾಡಲು ಕಾಂಗ್ರೆಸ್ ಸರಕಾರ ಮುಂದಾಗಿದೆ ಎಂದು ಕಟುವಾಗಿ ಆರೋಪಿಸಿದ್ದಾರೆ.
ಬಳ್ಳಾರಿ ರಸ್ತೆಯಲ್ಲಿ ಸಂಚಾರದಟ್ಟಣೆ ತಗ್ಗಿಸಲು ಸರಕಾರದ ಮುಂದೆ ಪರ್ಯಾಯ ಮಾರ್ಗಗಳಿವೆ. ಆದರೂ ಉಕ್ಕಿನ ಸೇತುವೆಗೆ ಜೋತು ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 1,800 ಕೋಟಿ ರೂ.ಜನರ ಹಣ ವಿನಿಯೋ ಗಿಸಲಾಗುತ್ತಿದೆ. ಜನಾಭಿಪ್ರಾಯವನ್ನೇ ಸಂಗ್ರಹಿಸಿಲ್ಲ. ಹಲವಾರು ಸಂಘಟನೆಗಳು, ಪರಿಸರವಾದಿಗಳು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರೂ, ಇದನ್ನೆಲ್ಲ ಕ್ಕರಿಸಿ ಸೇತುವೆ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ ಎಂದು ದೂರಿದ್ದಾರೆ.







