ರಶ್ಯ ಅಧ್ಯಕ್ಷರ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

ಬೆಂಗಳೂರು, ಆ.15: ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ರಶ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿಮಾನ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಗೋವಾಕ್ಕೆ ತೆರಳಬೇಕಿದ್ದ ಪುಟಿನ್ ಅವರ ವಿಶೇಷ ವಿಮಾನ ಗೋವಾ ಬದಲು ಬೆಂಗಳೂರಿನಲ್ಲಿ ಲ್ಯಾಂಡ್ ಆಗಿದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿಮಾನದಿಂದ ಇಳಿದು ವಿವಿಐಪಿ ಲಾಂಜ್‌ನಲ್ಲಿ ಇದ್ದಾರೆ. ಹವಾಮಾನ ವೈಪರಿತ್ಯದಿಂದಾಗಿ ಅವರ ವಿಮಾನ ಬೆಂಗಳೂರಿನಲ್ಲಿ ಇಳಿದಿದ್ದು, ಬೆಳಗ್ಗೆ 10:30ಕ್ಕೆ ಪುಟಿನ್ ಅವರ ವಿಶೇಷ ವಿಮಾನ ಗೋವಾಕ್ಕೆ ತೆರಳಲಿದೆ.
·
Next Story





