ಗೋವಾ ತಲುಪಿದ ರಶ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ಪಣಜಿ, ಅ.15: ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ರಶ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗೋವಾ ತಲುಪಿದ್ದಾರೆ.
ಪಣಜಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವ್ಲಾಡಿಮಿರ್ ಪುಟಿನ್ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು
ಪುಟಿನ್ ಅವರ ವಿಶೇಷ ವಿಮಾನ ಹವಾಮಾನ ವೈಪರಿತ್ಯದಿಂದಾಗಿ ಗೋವಾ ಬದಲು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ತುರ್ತು ಭೂಸ್ಪರ್ಶ ಮಾಡಿತ್ತು. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿಮಾನದಿಂದ ಇಳಿದು ವಿವಿಐಪಿ ಲಾಂಜ್‌ನಲ್ಲಿ ಸ್ವಲ್ಪ ಹೊತ್ತು ಇದ್ದರು. ಬಳಿಕ ಅವರ ವಿಮಾನ ಗೋವಾಕ್ಕೆ ಹೊರಟಿದ್ದು, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೋವಾ ತಲುಪಿದ್ದಾರೆ.
ಗೋವಾದ ರಾಜಧಾನಿ ಪಣಜಿಯ ಕಡಲ ಕಿನಾರೆಯಲ್ಲಿರುವ ಲೀಲಾ ಹೋಟೆಲ್‍ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ 8ನೇ ಬ್ರಿಕ್ಸ್ ಸಮ್ಮೇಳನ ನಡೆಯಲಿದ್ದು, ಭಾರತ, ಬ್ರೆಜಿಲ್, ರಷ್ಯಾ, ಚೀನಾ ಹಾಗೂ ದಕ್ಷಿಣ ಆಫ್ರಿಕದ ಮುಖ್ಯಸ್ಥರು ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಮೊದಲ ಬ್ರಿಕ್ಸ್ ಸಮ್ಮೇಳನ ಇದಾಗಿದ್ದು, ಜಾಗತಿಕವಾಗಿ ಗಮನ ಸೆಳೆದಿದೆ. ಸಮ್ಮೇಳನ ನಡೆಯುವ ಸ್ಥಳದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಭದ್ರತೆಗೆ ಸೇನೆಯನ್ನು ನಿಯೋಜಿಸಲಾಗಿದೆ.
#WATCH Russian President Vladimir Putin arrives in Goa for the #BRICSSummit pic.twitter.com/7GvoRz4zqo
— ANI (@ANI_news) October 15, 2016







