ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯನ್ನು ಟೀಕಿಸಿದ ಶಿವಸೇನೆ

ಮುಂಬೈ, ಅಕ್ಟೋಬರ್ 15: ಭಾರತ ಒಂದು ಜಾತ್ಯತೀತ ದೇಶವಾದ್ದರಿಂದ ಮಾತ್ರವೇ ಕೇಂದ್ರ ಕಾನೂನು ಆಯೋಗ ಹೊರಡಿಸಿದ ಪ್ರಶ್ನಾವಳಿಯನ್ನು ಬಹಿಷ್ಕರಿಸಲು ಮುಸ್ಲಿಂ ವೈಯಕ್ತಿಕ ಕಾನೂನ ಮಂಡಳಿ ಧೈರ್ಯ ಮಾಡಿದೆ ಎಂದು ಶಿವಸೇನೆ ಟೀಕಿಸಿದೆ.ಇಸ್ಲಾಮಿಕ್ ರಾಷ್ಟ್ರವಾಗಿದ್ದರೆ ತಿದ್ದುಪಡಿಯನ್ನು ವಿರೋಧಿಸುವ ಶಕ್ತಿ ಮಂಡಳಿಗಿರುತ್ತಿರಲಿಲ್ಲ ಎಂದು ಶಿವಸೇನೆಯ ವಕ್ತಾರ ನೀಲಂ ಗೋರೆ ಹೇಳಿದ್ದಾರೆಂದು ವರದಿಯಾಗಿದೆ.
ಧರ್ಮಗಳ ಆಧಾರವಾಗಿರಿಸಿ ದೇಶದ ಕಾನೂನಿದೆ. ಹಿಂದೂ, ಕ್ಯಾಥೊಲಿಕ್ ಸಮುದಾಯಗಳಿಗೆ ಸಂಬಂಧಿಸಿದ ಕಾನೂನುಗಳು ಈ ಹಿಂದೆ ತಿದ್ದುಪಡಿಯಾಗಿದೆ. ಇವರಿಗೆ ಬದಲಾವಣೆಯನ್ನು ಸಹಿಸಲು ಸಾಧ್ಯವಿದೆಯೆಂದಾದರೆ ಯಾಕೆ ಮುಸ್ಲಿಮರಿಗೆ ಸಾಧ್ಯವಿಲ್ಲ ಎಂದು ಗೋರೆ ಪ್ರಶ್ನಿಸಿದ್ದಾರೆಂದು ವರದಿ ತಿಳಿಸಿದೆ.
Next Story





