ವಾರಣಾಸಿಯ ರಾಜ್ ಘಾಟ್ ನಲ್ಲಿ ಕಾಲ್ತುಳಿತಕ್ಕೆ 24 ಜನರು ಬಲಿ
.jpg)
ಲಕ್ನೋ, ಅ.15: ವಾರಣಾಸಿಯ ರಾಜ್ ಘಾಟ್ ಸೇತುವೆಯಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ 24 ಮಂದಿ ಮೃತಪಟ್ಟು 50 ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಇಂದು ನಡೆದಿದೆ.
ಗಂಗಾ ನದಿಯ ದಡದಲ್ಲಿರುವ ದೋಮ್ರಿಯಲ್ಲಿ ಧಾರ್ಮಿಕ ನಾಯಕ ಜೈ ಗುರುದೇವ್ ಅವರ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಹಸ್ರಾರು ಮಂದಿ ತೆರಳುತ್ತಿದ್ದಾಗ ರಾಜ್ ಘಾಟ್ ಸೇತುವೆಯಲ್ಲಿ ನೂಕುನುಗ್ಗಲು ಉಂಟಾಯಿತು. ಈ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ 24 ಮಂದಿ ಮೃತಪಟ್ಟರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
Next Story





