ವಲಯದ ಅಶಾಂತಿಗೆ ಕಾಶ್ಮಿರವೇ ಮುಖ್ಯ ಕಾರಣ: ಶರೀಫ್

ಇಸ್ಲಾಮಾಬಾದ್, ಅ. 15: ಭಾರತಕ್ಕೆ ಕಾಶ್ಮೀರ ವಿವಾದವನ್ನು ಪರಿಹರಿಸುವ ಮನಸ್ಸಿದ್ದರೆ, ಅದರೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನ ಸಿದ್ಧವಿದೆ ಎಂದು ಆ ದೇಶದ ಪ್ರಧಾನಿ ನವಾಝ್ ಶರೀಫ್ ಶನಿವಾರ ಹೇಳಿದ್ದಾರೆ. ಈ ವಲಯದಲ್ಲಿರುವ ‘‘ಅಶಾಂತಿಗೆ ಕಾಶ್ಮೀರವೇ ಮುಖ್ಯ ಕಾರಣ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಹತ್ವದ ವಿಷಯಗಳ ಬಗ್ಗೆ ಮಾತುಕತೆ ನಡೆಸುವ ಪ್ರಸ್ತಾಪವನ್ನು ಪಾಕಿಸ್ತಾನ ಹಲವು ಬಾರಿ ಮುಂದಿಟ್ಟಿದೆ, ಆದರೆ, ಭಾರತ ಅದಕ್ಕೆ ಸರಿಯಾಗಿ ಸ್ಪಂದಿಸಿಲ್ಲ ಎಂದು ಅಝರ್‌ಬೈಜಾನ್ ದೇಶದ ಬಾಕು ವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರೀಫ್ ಹೇಳಿದರು. ಅಝರ್‌ಬೈಜಾನ್‌ಗೆ ನೀಡಿದ ತನ್ನ ಮೂರು ದಿನಗಳ ಭೇಟಿಯ ಮುಕ್ತಾಯದ ವೇಳೆ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
‘‘ಈ ವಲಯದಲ್ಲಿನ ಅಶಾಂತಿಗೆ ಮುಖ್ಯ ಕಾರಣ ಕಾಶ್ಮೀರ. ಈ ವಿವಾದದ ಇತ್ಯರ್ಥಕ್ಕೆ ಭಾರತ ಗಂಭೀರ ಮನೋಭಾವವನ್ನು ಹೊಂದಬೇಕು ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದಲ್ಲಿ ಉಲ್ಲೇಖಿಸಲಾಗಿರುವ ತನ್ನ ಬದ್ಧತೆಯನ್ನು ಗೌರವಿಸಬೇಕು’’ ಎಂದು ಅವರು ಹೇಳಿದರು.
Next Story





