ಮನುಷ್ಯನ ಮನಪರಿವರ್ತನೆಗೆ ಮಹರ್ಷಿ ವಾಲ್ಮೀಕಿ ಮಾದರಿ:ತಾಪಂ ಅಧ್ಯಕ್ಷೆ ಪ್ರಮೀಳಾ ನಾಯ್ಕ
ವಾಲ್ಮೀಕಿ ಜಯಂತಿ ಕಾರ್ಯಕ್ರಮ

ಕಾರವಾರ,ಅ.15: ಮನುಷ್ಯನ ಮನ ಪರಿವರ್ತನೆಗೆ ಮಹಾನ್ ದಾರ್ಶನಿಕನಾದ ಮಹರ್ಷಿ ವಾಲ್ಮೀಕಿ ಉತ್ತಮ ಮಾದರಿಯಾಗಿದ್ದಾರೆ ಎಂದು ತಾಪಂ ಅಧ್ಯಕ್ಷೆ ಪ್ರಮೀಳಾ ನಾಯ್ಕ ಹೇಳಿದರು.
ಶನಿವಾರ ಅವರು ಜಿಲ್ಲಾ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುತ್ತಿರು ವುದು ಸಂತೋಷಕರ ವಿಷಯವಾಗಿದೆ. ಯುವಕರು ಸಹ ಇಂತಹ ಆಚರಣೆಗಳ ಮೂಲಕ ನಾವೆಲ್ಲರು ಒಳ್ಳೆಯದನ್ನು ತಿಳಿದು ಕಲಿಯಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಅಥಿತಿಯಾಗಿ ಪಾಲ್ಗೊಂಡಿದ್ದ ನಗರ ಸಭೆ ಉಪಾಧ್ಯಕ್ಷೆ ಲೀಲಾಬಾಯಿ ರಾಣೇಕರ್ ಮಾತನಾಡಿ, ಪ್ರಾರಂಭದ ದಿನದಲ್ಲಿ ವಾಲ್ಮೀಕಿ ದರೋಡೆಕಾರ ನಾಗಿದ್ದು ಜನರಿಗೆ ಹಾನಿಯನ್ನುಂಟು ಮಾಡುತ್ತಿದ್ದರು. ನಾರದರಿಂದ ಮನ ಪರಿವರ್ತಿಸಿಕೊಂಡು ಜಗತ್‌ಪ್ರಸ್ತಿದ್ದ ರಾವಾಯಣ ರಚಿಸಿದರು ಎಂದರು. ಉಪನ್ಯಾಸಕರಾಗಿ ಪಾಲ್ಗೊಂಡಿದ್ದ ಮೈಸೂರಿನ ಭಾರತ ಭಾಷಾ ಸಂಸ್ಥಾನದ ಡಾ. ಆರ್. ಛಲಪತಿ ಅವರು ಮಹರ್ಷಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಜಿಲ್ಲೆಯ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಕಲ್ಪನಾ ಕಲಾ ತಂಡದವರಿಂದ ವಾಲ್ಮೀಕಿ ಕುರಿತು ನೃತ್ಯ ರೂಪಕ ನಡೆಸಿಕೊಟ್ಟರು. ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಹಮ್ಮಿಕೊಂಡ ಮೆರವಣಿಗೆಗೆ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಅವರು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಚಾಲನೆ ನೀಡಿದರು. ವಿವಿಧ ಸಂಘ ಸಂಸ್ಥೆಗಳು, ಶಾಲಾ ಮಕ್ಕಳು, ವಿವಿಧ ವೇಷಧಾರಿಗಳಾಗಿ ಜಿಲ್ಲಾ ರಂಗಮಂದಿರದವರೆಗೆ ಸಾಗಿದ ಮೆರವಣಿಗೆಯಲ್ಲಿ ಭಾಗವಹಿಸಿದರು.







