ಈದ್ಗಾ ಫ್ರೆಂಡ್ಸ್ ಜೋಕಟ್ಟೆ,ಮಂಗಳೂರು ಇದರ ನೂತನ ಕಚೇರಿ ಉದ್ಘಾಟನೆ
ವಿಕಲ ಚೇತನರಿಗೆ ವೀಲ್ ಚೆಯರ್ ವಿತರಣೆ

ಮಂಗಳೂರು, ಅ. 15: ಜೋಕಟ್ಟೆಯ ಈದ್ಗಾ ಫ್ರೆಂಡ್ಸ್‌ನ ನೂತನ ಕಚೇರಿಯ ಉದ್ಘಾಟನೆ ಹಾಗೂ ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ವಿಕಲ ಚೇತನರಿಗೆ ವೀಲ್ ಚೆಯರ್ ವಿತರಣಾ ಕಾರ್ಯಕ್ರಮವು ಇಂದು ಜೋಕಟ್ಟೆ ಜಂಕ್ಷನ್‌ನಲ್ಲಿ ನಡೆಯಿತು.
ದ.ಕ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೂತನ ಈದ್ಗಾ ಫ್ರೆಂಡ್ಸ್ ಕಚೇರಿಯನ್ನು ಉದ್ಘಾಟಿಸಿ, 15 ಮಂದಿ ವಿಕಲ ಚೇತನರಿಗೆ ವೀಲ್ ಚೆಯರ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 5ನೇ ವಾರ್ಷಿಕೋತ್ಸವದ ಅಂಗವಾಗಿ ಈದ್ಗಾ ಫ್ರೆಂಡ್ಸ್ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿಕಲ ಚೇತನರಿಗೆ ವೀಲ್ ಚೆಯರ್ ವಿತರಿಸಿರುವು ಶ್ಲಾಘನೀಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಬಿ.ಎಸ್. ಬಶೀರ್ ಅಹ್ಮದ್ ವಹಿಸಿದ್ದರು. ಈ ಸಂದರ್ಭದಲ್ಲಿ ಮುಹಿಯುದ್ದೀನ್ ಹೊಸ ಜುಮಾ ಮಸೀದಿ ಮಾಜಿ ಅಧ್ಯಕ್ಷರು ಹಾಗೂ ದ.ಕ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಜಿ ಜೆ. ಮುಹಮ್ಮದ್, ಮುಹಿಯುದ್ದೀನ್‌ಹಳೆ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್, ಜೋಕಟ್ಟೆ ಮುಹಿದ್ದೀನ್ ಹೊಸ ಜುಮಾ ಮಸೀದಿ ಅಧ್ಯಕ್ಷ ಸಂಶುದ್ದೀನ್, ಜೋಕಟ್ಟೆ ಅಂಜುಮಾನ್ ಖುವ್ವತುಲ್ ಇಸ್ಲಾಂನ ಅಧ್ಯಕ್ಷ ಹಾಜಿ ಬಿ.ಎ. ರಶೀದ್, ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಹಾಜಿ ಬಿ.ಎಸ್.ಹುಸೈನ್, ಜೋಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೆಸಿಲ್ಲ ಮೊಂತೆರೊ, ಉಪಾಧ್ಯಕ್ಷ ಸಂಶು ಇದ್ದಿನಬ್ಬ, ಸದಸ್ಯರಾದ ಶರೀಫ್ ಬೊಟ್ಟು, ಅಬ್ದುಲ್ ಖಾದರ್ ಕೊಡಂಗೆ, ಅಬೂಬಕರ್ ಬಾವ, ಕೆವಿನ್ ಪಿರಾವೊ, ಮನೋಜ್ ಶೆಟ್ಟಿ ಇಂಫೊಟೆಕ್, ಶೇಖರ್ ಟಿ.ಅಮೀನ್, ಪಿಡಬ್ಲು ಕಾಂಟ್ರಾಕ್ಟರ್ ಅಸ್ಗರ್, ಈದ್ಗಾ ಫ್ರೆಂಡ್ಸ್ ಅಧ್ಯಕ್ಷ ಹಝ್ಮಲ್ ಮೂಸ , ಆಝಾದ್ ಯೂತ್ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಫಯಾಝ್ ಬಿ.ಕೆ., ಮೊದಲಾದವರು ಉಪಸ್ಥಿತರಿದ್ದರು.







