ಅ.21: ‘ಸೀತಾನದಿ’ ತೆರೆಗೆ
ಉಡುಪಿ, ಅ.15: ಹೆಬ್ರಿಯ ರತಿಸಿನಿ ಕ್ರಿಯೇಷನ್ಸ್ ನಿರ್ಮಾಣದ ‘ಸೀತಾನದಿ’ ಕನ್ನಡ ಚಲನಚಿತ್ರ ಅ.21ರಂದು ರಾಜ್ಯಾದ್ಯಂತ ಚಿತ್ರಮಂದರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಕೆ.ಶರತ್ ತಿಳಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಮಹಿಳಾ ಪ್ರಧಾನವಾದ ಕೌಟುಂಬಿಕ ಚಿತ್ರವಾಗಿದ್ದು,ಸಾಮಾಜಿಕ ಕಳಕಳಿಯನ್ನು ಹೊಂದಿದೆ. ಮುಂಬೈನ ಮುನಿಯಾಲಿನ ಎಸ್.ಡಿ.ಶೆಟ್ಟಿ ಚಿತ್ರದ ನಿರ್ಮಾಪಕರಾಗಿದ್ದು, ಹೆಬ್ರಿ, ಮುನಿಯಾಲು, ಸೀತಾನದಿ ಸುತ್ತಮುತ್ತ ಚಿತ್ರೀಕರಣವನ್ನು ನಡೆಸಲಾಗಿದೆ ಎಂದರು.
ಕಿರುತೆರೆಯ ಜನಪ್ರಿಯ ನಟ ವಿಷ್ಣು ವಲ್ಲಭ ಮತ್ತು ಶ್ರೇಯಾ ಚಿತ್ರದ ನಾಯಕ-ನಾಯಕಿಯರಾಗಿ ನಟಿಸಿದ್ದಾರೆ. ಹಿರಿಯರಾದ ಹೊನ್ನವಳ್ಳಿ ಕೃಷ್ಣ, ತನುಜಾ, ಧೀರ್ ಕುಲ್‌ದೀಪ್, ನರೇಂದ್ರ ಕಬ್ಬಿನಾಲೆ, ಪವಿತ್ರಾ ಶೆಟ್ಟಿ, ಪಟೇಲ್ ಅಣ್ಣಯಪ್ಪ ನಟಿಸಿದ್ದಾರೆ.
ಕಾರ್ಕಳ ಶಾಸಕ ವಿ.ಸುನೀಲ್‌ಕುಮಾರ್, ಪತ್ರಕರ್ತ ಮನೋಹರ್ ಪ್ರಸಾದ್ ಹಾಗೂ ಸಾಹಿತಿ ಅಂಬಾತನಯ ಮುದ್ರಾಡಿ ಗೌರವ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಶರತ್ ವಿವರಿಸಿದರು.
ನರೇಂದ್ರ ಕಬ್ಬಿನಾಲೆ, ಡಿಬಿಸಿ ಶೇಖರ್, ಧೀರ್ ಕುಲ್‌ದೀಪ್ ಆಗೂ ಪವಿತ್ರಾ ಶೆಟ್ಟಿ ಉಪಸ್ಥಿತರಿದ್ದರು.





