ಐಎಸ್‌ಎಲ್: ಡೆಲ್ಲಿ -ನಾರ್ಥ್ ಈಸ್ಟ್ ಪಂದ್ಯ ಡ್ರಾ

ಹೊಸದಿಲ್ಲಿ, ಅ.15:ಇಲ್ಲಿನ ಜವಾಹರ್‌ಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಡೈನಾಮೊಸ್ ಎಫ್‌ಸಿ ಮತ್ತು ನಾರ್ಥ್ ಈಸ್ಟ್ ಯುನೈಟೆಡ್ ಎಫ್‌ಸಿ ತಂಡಗಳ ನಡುವಿನ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಪಂದ್ಯ 1-1 ಡ್ರಾದಲ್ಲಿ ಕೊನೆಗೊಂಡಿದೆ.
ಡೆಲ್ಲಿ ಡೈನಾಮೊಸ್‌ನ ಲೆವಿಸ್ (38ನೆ ನಿಮಿಷ) ಮತ್ತು ನಾರ್ಥ್ ಈಸ್ಟ್ ಯುನೈಟೆಡ್ ತಂಡ (ಅಲ್ಫಾರೊ 51ನೆ ನಿಮಿಷ) ತಲಾ ಒಂದು ಗೋಲು ದಾಖಲಿಸಿದರು.
ಪಂದ್ಯದ ಪ್ರಥಮಾರ್ಧದ 38ನೆ ನಿಮಿಷದಲ್ಲಿ ಡೆಲ್ಲಿ ತಂಡ ಲೆವಿಸ್ ಗೋಲು ದಾಖಲಿಸಿ ತಂಡದ ಗೋಲು ಖಾತೆ ತೆರೆದಿದ್ದರು. ಇದರೊಂದಿಗೆ ಡೆಲ್ಲಿ ಪ್ರಥಮಾರ್ಧದಲ್ಲಿ 1-0 ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯಾರ್ಧದ 51ನೆ ನಿಮಿಷದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ತಂಡದ ಅಲ್ಫಾರೊ ಗೋಲು ಜಮೆ ಮಾಡಿ 1-1 ಸಮಬಲ ಸಾಧಿಸಿದರು.
Next Story





