ಮೂಡುಬಿದಿರೆ: ‘ಅಂಗಾಂಗ ದಾನ ಘೋಷಣೆ’ ಕಾರ್ಯಕ್ರಮ
ಮೂಡುಬಿದಿರೆ, ಅ.16: ‘ದಸರಾ ಸಮ್ಮಿಲನ’ದ ಅಂಗವಾಗಿ ಪಂಡಿತ್ಸ್ ರೆಸಾರ್ಟ್, ಕೆಎಂಸಿ ಮಂಗಳೂರು, ಮೂಡುಬಿದಿರೆಯ ರೋಟರಿ ಕ್ಲಬ್ ಮತ್ತು ಕರ್ನಾಟಕ ಅಂಗಾಂಗ ಜೋಡನಾ ಸಂಯೋಜನಾ ವಲಯ ಸಮಿತಿ ಇವುಗಳ ಸಹಭಾಗಿತ್ವದಲ್ಲಿ ಆಯೋಜಿಸಲಾದ ‘ಅಂಗಾಂಗ ದಾನ ಘೋಷಣಾ’ ಕಾರ್ಯಕ್ರಮವು ಇತ್ತೀಚೆಗೆ ಪಂಡಿತ್ಸ್ ಹೆಲ್ತ್ ರೆಸಾರ್ಟ್‌ನಲ್ಲಿ ನಡೆಯಿತು. ಮೂಡುಬಿದಿರೆ ಜೈನ ಮಠಾಧೀಶ ಸ್ವಸ್ತಿ ಶ್ರೀಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಈಗಾಗಲೇ ಅಂಗಾಂಗ ದಾನದ ಘೋಷಣಾ ಪತ್ರವನ್ನು ಸಲ್ಲಿಸಿರುವವರಿಗೆ ಪ್ರಶಂಸಾ ಪತ್ರ ವಿತರಿಸಿದರು. ಮಂಗಳೂರು ಕೆಎಂಸಿ ಯುರೋಲಜಿ ವಿಭಾಗ ಮುಖ್ಯಸ್ಥ ಡಾ.ಲಕ್ಷ್ಮಣ್ ಪ್ರಭು ಅಂಗಾಂಗ ದಾನದ ಕುರಿತಾದ ಮಿಥ್ಯೆಗಳು, ಸಂದೇಹಗಳಿಗೆ ಉತ್ತರ ನೀಡಿ, ಅಂಗಾಂಗ ದಾನದ ವಿಧಾನ, ಕಾನೂನು ಪರಿಮಿತಿ ಮಾಹಿತಿಯನ್ನು ವಿವರಿಸಿದರು.
ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ.ಆನಂದ್ ವೇಣುಗೋಪಾಲ್, ಮೂಡುಬಿದಿರೆ ಆಳ್ವಾಸ್ ಹೆಲ್ತ್ ಸೆಂಟರ್‌ನ ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ನಾಯಕ್, ಆಲಂಗಾರು ಚರ್ಚ್ ಧರ್ಮಗುರು ರೆ.ಫಾ.ಬಾಸಿಲ್ ವಾಝ್, ಬಿಜೆಪಿ ಮುಖಂಡ ಕೆ.ಪಿ.ಜಗದೀಶ್ ಅಧಿಕಾರಿ, ರೋಟರಿ ಕ್ಲಬ್ ಅಧ್ಯಕ್ಷ ಮುಹಮ್ಮದ್ ಶರೀಫ್, ಮಹಾರಾಷ್ಟ್ರದ ಮಾಜಿ ಡಿಜಿಪಿ ಶ್ರೀದೇವಿ ಗೋಯಲ್, ಮಹಾರಾಷ್ಟ್ರ ಸರಕಾರದ ಪೂರ್ವ ಮುಖ್ಯ ಕಾರ್ಯದರ್ಶಿ ಚಾಂದ್ ಗೋಯೆಲ್, ಜೆಟ್ ಏರ್‌ವೇಸ್‌ನ ಸೆಕ್ಯೂರಿಟಿ ಮ್ಯಾನೇಜರ್ ಅರ್ಚನಾ ಉಪಸ್ಥಿತರಿದ್ದರು.
ಲಯನ್ಸ್ ಕಾರ್ಯದರ್ಶಿ ಡಾ.ಶೆಟ್ಟಿ, ಪುರಸಭಾ ಸದಸ್ಯ ಪಿ.ಕೆ.ಥಾಮಸ್, ವಕೀಲರ ಸಂಘದ ಅಧ್ಯಕ್ಷ ಬಾಹುಬಲಿ ಪ್ರಸಾದ್, ಆ್ಯಕ್ಸಿಸ್ ಬ್ಯಾಂಕ್‌ನ ಉಪಪ್ರಬಂಧಕ ಗಣೇಶ್ ಭಟ್, ಸ್ಪೈಸ್ ಜೆಟ್ ವಿಮಾನ ನಿಲ್ದಾಣ ಸಿಬಂದಿ ಭಾಗವಹಿಸಿದ್ದರು. ಪಂಡಿತ್ಸ್ ರೆಸಾರ್ಟ್‌ನ ಅಧ್ಯಕ್ಷೆ ರೂಬಿ ಅಗರ್‌ವಾಲ್ ಸ್ವಾಗತಿಸಿದರು. ಪಂಡಿತ್ಸ್‌ನ ಮುಖ್ಯ ಪ್ರವರ್ತಕ ಲಾಲ್ ಗೋಯೆಲ್ ವಂದಿಸಿದರು. ರೀಟಾ ಡೇಸಾ ಕಾರ್ಯಕ್ರಮ ನಿರೂಪಿಸಿದರು.





