‘ದೇವಾಲಯಗಳಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ’
.jpg)
ಉಪ್ಪಿನಂಗಡಿ, ಅ.16: ಗ್ರಾಮ ದೇವಾಲಯ ಎನ್ನುವುದು ಊರಿಗೆ ಹೃದಯವಿದ್ದಂತೆ. ದೇವಾಲಯಗಳಿದ್ದರೆ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಒಡಿಯೂರು ಶ್ರೀಗುರುದೇವಾನಂದ ಸಂಸ್ಥಾನದ ಶ್ರೀಗುರು ದೇವಾನಂದ ಸ್ವಾಮೀಜಿ ತಿಳಿಸಿದರು.
ಹಿರೇಬಂಡಾಡಿ ಗ್ರಾಮದ ದಾಸರಮೂಲೆಯ ದೇವರಗುಂಡದಲ್ಲಿ ಜೀರ್ಣೋದ್ಧಾರ ನಡೆಯುತ್ತಿರುವ ಶ್ರೀಮಹಾವಿಷ್ಣು ವೆಂಕಟರಮಣ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ‘ಷಡಾಧಾರ ಪ್ರತಿಷ್ಠೆ’ ಮತ್ತು ‘ಗರ್ಭಾನ್ಯಾಸ’ ಹಾಗೂ ‘ರಕ್ತೇಶ್ವರಿ ದೈವದ ಪ್ರತಿಷ್ಠೆ’ಯ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಅಶೋಕ್ ರೈ ಕೋಡಿಂಬಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ಯಾಮ್ ಸುದರ್ಶನ್ ಭಟ್ ಹೊಸಮೂಲೆ ಧಾರ್ಮಿಕ ಉಪನ್ಯಾಸ ನೀಡಿದರು.ದ.ಕ. ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿ, ಕೆಡಿಪಿ ಜಿಲ್ಲಾ ಸದಸ್ಯ ಸತೀಶ್ ಕೆಡೆಂಜಿ ಮಾತನಾಡಿದರು.
ತಾಪಂ ಸದಸ್ಯೆ ಸುಜಾತಾ ಕೃಷ್ಣ ಆಚಾರ್ಯ, ಮಾಜಿ ಸದಸ್ಯ ಎನ್.ಉಮೇಶ್ ಶೆಣೈ, ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಡಾ.ನಿರಂಜನ್ ರೈ, ಪ್ರಮುಖರಾದ ಕೆ.ಪಿ.ಸುರೇಶ್, ಎನ್.ಗಣೇಶ್ ಶೆಣೈ, ಗೋಪಾಲಕೃಷ್ಣ ಸುವರ್ಣ, ದೇವಸ್ಥಾನದ ತಂತ್ರಿ ರಾಘವೇಂದ್ರ ಅಸ್ರಣ್ಣ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಪ್ರ.ಕಾರ್ಯದರ್ಶಿ ಸದಾನಂದ ದಾಸರಮೂಲೆ ಸ್ವಾಗತಿಸಿದರು. ಕಾರ್ಯದರ್ಶಿ ಸೌಮ್ಯಾ ಆಚಾರ್ಯ ನೂಜಿ ವಂದಿಸಿದರು. ರಾಘವ ಎಚ್. ಗೇರುಕಟ್ಟೆ ಹಾಗೂ ವಿನೋದ್ ಬೋಂಟ್ರಪಾಲ್ ಕಾರ್ಯಕ್ರಮ ನಿರೂಪಿಸಿದರು. ರಾಜಗೋಪಾಲ್ ಭಟ್ ಕೈಲಾರ್ ಸಹಕರಿಸಿದರು.





