ಐಎಸ್‌ಎಲ್:ಕೋಲ್ಕತಾ-ಗೋವಾ ಪಂದ್ಯ ಡ್ರಾ
ಕೋಲ್ಕತಾ, ಅ.16: ಅಟ್ಲಾಟಿಕೊ ಡಿ ಕೋಲ್ಕತಾ ಮತ್ತು ಎಫ್‌ಸಿ ಗೋವಾ ತಂಡಗಳ ನಡುವಿನ ಇಂಡಿಯನ್ ಸೂಪರ್ ಲೀಗ್ ಪಂದ್ಯ ಇಂದು ಡ್ರಾದಲ್ಲಿ ಕೊನೆಗೊಂಡಿದೆ.
ಕೋಲ್ಕತಾದ ರವೀಂದ್ರ ಸರೋವರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಡೆದ ಐಎಸ್‌ಎಲ್‌ನ 15 ಪಂದ್ಯದಲ್ಲಿ ಕೋಲ್ಕತಾ ತಂಡ ಡ್ರಾ ಸಾಧಿಸುವುದರೊಂದಿಗೆ ಉಭಯ ತಂಡಗಳು ತಲಾ 1 ಅಂಕಗಳನ್ನು ಹಂಚಿಕೊಂಡಿವೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಗೋವಾ ಅಂಕದ ಖಾತೆ ತೆರೆದಿದೆ. ಕೋಲ್ಕತಾ ತಂಡದ ಡೌಟಿ 6ನೇ ನಿಮಿಷದಲ್ಲಿ ಗೋಲು ಜಮೆ ಮಾಡಿ ತಂಡಕ್ಕೆ 1-0 ಮುನ್ನಡೆ ದೊರಕಿಸಿಕೊಟ್ಟರು.
ದ್ವಿತೀಯಾರ್ಧದ 77ನೆ ನಿಮಿಷದಲ್ಲಿ ಗೊಂಝಾಲಿಝ್ ಪೆನಾಲ್ಟಿ ಗೋಲು ಜಮೆ ಮಾಡಿದರು. ಇದರೊಂದಿಗೆ ಗೋವಾ ಸಮಬಲ ಸಾಧಿಸಿತು.
Next Story





