ಸುಸಜ್ಜಿತ ರಸ್ತೆ, ಕುಡಿಯುವ ನೀರು ಯೋಜನೆಗೆ ಆದ್ಯತೆ: ಸಚಿವ ಯು.ಟಿ ಖಾದರ್
ಉಳ್ಳಾಲ, ಅ.17: ಉಳ್ಳಾಲ ನಗರ ವ್ಯಾಪ್ತಿಯ 19ನೆ ವಾರ್ಡ್ ಉಳ್ಳಾಲ ಬೈಲು ಗೇರು ಸಂಶೋಧನಾ ಕೇಂದ್ರದ ಬಳಿಯ ರಸ್ತೆಗೆ ನೂತನವಾಗಿ ನಡೆಯಲಿರುವ ಕಾಂಕ್ರಿಟೀಕರಣ ಕಾಮಗಾರಿಗೆ ಸೋಮವಾರದಂದು ಆಹಾರ ಸಚಿವ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಉಳ್ಳಾಲ ನಗರಸಭೆ ಅಭಿವೃದ್ಧಿಗೆ ಈಗಾಗಲೇ ಸರಕಾರದಿಂದ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು ನಗರ ವ್ಯಾಪ್ತಿಯಲ್ಲಿ ಸುಸಜ್ಜಿತ ರಸ್ತೆ ಮತ್ತು ಸಮಪರ್ಕಕ ನೀರು ಪೂರೈಸಲಿಕ್ಕಾಗಿ ಈ ಅನುದಾನವನ್ನು ಸದುಪಯೋಗಪಡಿಸಲಾಗುವುದೆಂದು ಹೇಳಿದರು.
ನಗರ ವ್ಯಾಪ್ತಿಯ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಸಲುವಾಗಿಯೇ ಸರಕಾರದಿಂದ 25 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆಯ್ದ ವಾರ್ಡ್‌ಗಳಿಗೆ ಅನುದಾನ ವಿಂಗಡಿಸಿ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಸ್ಥಳೀಯ ಕೌನ್ಸಿಲರ್‌ಗಳ ಬಹುದಿನಗಳ ಬೇಡಿಕೆಯ ಅನುಸಾರವಾಗಿ ರಸ್ತೆಗೆ ಕಾಂಕ್ರಿಟೀಕರಣ ನಡೆಸುವ ಕಾಮಗಾರಿಗೆ ಚಾಲನೆ ನೀಡಿರುವುದಾಗಿ ಹೇಳಿದರು.
ನಗರಾಧ್ಯಕ್ಷ ಹುಸೇನ್ ಕುಂಞಿಮೋನು, ಉಪಾಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ, ಸ್ಥಳೀಯ ಕೌನ್ಸಿಲರ್ ಸುಕುಮಾರ್ ಮೊದಲಾದವರು ಉಪಸ್ಥಿತರಿದ್ದರು.





.jpg.jpg)

