ಕಾಸರಗೋಡು: ಮೀನು ಸಾಗಾಟದ ಪಿಕಪ್ ಪಲ್ಟಿ

ಕಾಸರಗೋಡು, ಅ.17: ಮೀನು ಹೇರಿಕೊಂಡು ತೆರಳುತ್ತಿದ್ದ ಪಿಕಪ್ ಒಂದು ನಿಯಂತ್ರಣ ತಪ್ಪಿ ರಸ್ತೆಬದಿಗೆ ಮಗುಚಿ ಬಿದ್ದ ಘಟನೆ ಸೋಮವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯ ಚೌಕಿ ಕಲ್ಲಂಗೈಯಲ್ಲಿ ನಡೆದಿದೆ.
ಲಾರಿ ಚಾಲಕ ಮತ್ತು ಕ್ಲೀನರ್ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಕಾಸರಗೋಡಿನಿಂದ ಮಂಗಳೂರಿನತ್ತ ತೆರಳುತ್ತಿದ್ದ ಪಿಕಪ್ ಕಲ್ಲಂಗೈ ಬಳಿ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ ಎನ್ನಲಾಗಿದೆ. ಪಲ್ಟಿಯಾದ ವಾಹನದಲ್ಲಿ ಬಂಗುಡೆ, ಬೂತಾಯಿ ಮುಂತಾದ ಮೀನುಗಳಿದ್ದು, ಸ್ಥಳೀಯ ಮಂದಿ ಮುಗಿಬಿದ್ದು ಮೀನುಗಳನ್ನು ಕೊಂಡೊಯ್ದಿದ್ದಾರೆ ಎಂದು ತಿಳಿದುಬಂದಿದೆ.
Next Story





