100 ರೂ.ನೋಟನ್ನು ಪಡೆಯುವಮುನ್ನ ಎರಡೆರಡು ಬಾರಿ ಪರೀಕ್ಷಿಸಿ
ಕಾರಣ ಇಲ್ಲಿದೆ

ಮುಂಬೈ,ಅ.17: 100 ರೂ.ನೋಟನ್ನು ಬಿಡುಗಡೆಗೊಳಿಸುವುದು ಭಾರತೀಯ ರಿಜರ್ವ್ ಬ್ಯಾಂಕ್ ಮಾತ್ರ ಅಲ್ಲ.....‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ’ ಕೂಡ ಪ್ರತಿಶತ ನೂರರಷ್ಟು ನಕಲಿ ಮತ್ತು ವೌಲ್ಯರಹಿತ 100 ರೂ.ನೋಟುಗಳನ್ನು ಬಿಡುಗಡೆಗೊಳಿಸುತ್ತಿದೆ!
ಮುಂಬೈನ ನಟಿ ಮೇಘಾ ಚಕ್ರವರ್ತಿ ಇತ್ತೀಚಿಗೆ ಇಂತಹ ನೋಟಿನ ಚಿತ್ರವೊಂದನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸುಮಾರು 10,000 ಲೈಕ್‌ಗಳು ಬಂದಿದ್ದು,ಸುಮಾರು 1,500 ಬಾರಿ ಶೇರ್ ಆಗಿದೆ. ಮೇಘಾ ನಕಲಿ ಎನ್ನುವುದು ಗೊತ್ತಾಗದೆ ಆಟೋ ಚಾಲಕನೋರ್ವನಿಂದ ಈ ನೋಟನ್ನು ಪಡೆದುಕೊಂಡಿದ್ದರು. ಈ ಪೋಸ್ಟ್ ವೈರಲ್ ಆಗಿದೆ ಎಂದು ಬೇರೆ ಹೇಳಬೇಕಿಲ್ಲ.

ಅಂದ ಹಾಗೆ ಈ ನೋಟು ತುಂಬ ಮೋಜಿನಿಂದ ಕೂಡಿದೆ.ಚಿಲ್ಡ್ರನ್ ಬ್ಯಾಂಕಿನ ಗವರ್ನರ್ ಬೇರೆ ಯಾರೂ ಅಲ್ಲ...ಖುದ್ದು ಸಾಂತಾಕ್ಲಾಸ್! ಸಾಚಾ ನೋಟಿನಲ್ಲಿ ‘ಐ ಪ್ರಾಮಿಸ್ ಟು ಪೇ ಒನ್ ಹಂಡ್ರೆಡ್ ರುಪೀಸ್’ಎಂಬ ಭರವಸೆಯೊಂದಿಗೆ ಆರ್‌ಬಿಐ ಗವನ್‌ರ್ ಸಹಿ ಇದ್ದರೆ ಈ ನೋಟಿನಲ್ಲಿ ‘ ಐ ಪ್ರಾಮಿಸ್ ಟು ಪ್ಲೇ ವಿತ್ ದಿ ಕೂಪನ್ ಹಂಡ್ರೆಡ್’ ಎಂಬ ಭರವಸೆಯೊಂದಿಗೆ ಸಾಂತಾಕ್ಲಾಸ್ ಸಹಿ ಇದೆ.
ಅಂದ ಹಾಗೆ ಈ ನೋಟಿನ ಮೇಲೆ ಎಲ್ಲೂ 100 ರು.ಎಂದು ಉಲ್ಲೇಖಿಸಲಾಗಿಲ್ಲ. ಅದು ಚಿಲ್ಡ್ರನ್ ಬ್ಯಾಂಕ್ ಖಾತರಿ ಇರುವ ‘ಒನ್ ಹಂಡ್ರೆಡ್ ಕೂಪನ್’ ಎಂದು ಹೇಳಿಕೊಂಡಿದೆ.
ಇಲ್ಲಿರುವ ನೋಟಿನ(ಕೂಪನ್ನಿನ) ಚಿತ್ರವನ್ನು ನೀವೇ ನೋಡಿ,ಮೋಸ ಹೋಗುವುದು ಗ್ಯಾರಂಟಿ ಅಲ್ಲವೇ?







