ಮಾನವ ಹಕ್ಕುಗಳ ಪ್ರತಿಪಾದನೆ ತಳಮಟ್ಟದಿಂದಲೇ ಆಗಲಿ: ಹಿಲ್ಡಾ

ಮೂಡುಬಿದಿರೆ, ಅ.17: ಮಾನವ ಹಕ್ಕುಗಳು ಸ್ಥಳೀಯ ಮಟ್ಟದಿಂದ ಕಾರ್ಯಾರಂಭಿಸಿದರೆ ಇಡೀ ಪ್ರಪಂಚಕ್ಕೆ ಹಬ್ಬಿಸುವುದರಲ್ಲಿ ಸಂದೇಹವಿಲ್ಲ. ಇದರಲ್ಲಿ ಮಹಿಳೆಯರ ಪಾತ್ರ ಅಪಾರ ಎಂದು ಮಂಗಳೂರಿನ ಪ್ರಜ್ಞಾ ಡಿ ಎಡಿಕ್ಷನ್ ಕೇಂದ್ರದ ಸ್ಥಾಪಕ ನಿರ್ದೇಶಕ ಪ್ರೊ.ಹಿಲ್ಡಾ ರಾಯಪ್ಪನ್ ಹೇಳಿದರು. ಶ್ರೀಧವಲಾ ಕಾಲೇಜಿನ ಮಾನವಿಕ ಸಂಘ ಮತ್ತು ಅರ್ಥಶಾಸ್ತ್ರ ಹಾಗೂ ಸಹಕಾರ ವಿಭಾಗಗಳ ಮತ್ತು ಜನ ಶಿಕ್ಷಣ ಟ್ರಸ್ಟ್ ಮುಡಿಪು ಇದರ ಜಂಟಿ ಆಯೋಗದಲ್ಲಿ ‘ಸ್ಥಳೀಯ ಸರಕಾರದಲ್ಲಿ ಮಾನವ ಹಕ್ಕುಗಳ ಕಾರ್ಯ’ ಎಂಬ ವಿಷಯದ ಕುರಿತು ಆಯೋಜಿಸಲಾದ ರಾಜ್ಯಮಟ್ಟದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರು ವಿವಿಯ ರಾಜಕೀಯ ಶಾಸ್ತ್ರ ವಿಭಾಗದ ಡಾ. ಧರ್ಮ ಮಾತನಾಡಿ, ವ್ಯಕ್ತಿಗಳು ಸ್ವಾಭಿಮಾನವನ್ನು ಬೆಳೆಸಿಕೊಂಡಾಗ ಶ್ರೇಷ್ಠ ವ್ಯಕ್ತಿಗಳಾಗಬಹುದು. ನಾವು ಎಲ್ಲರನ್ನು ಕೀಳು ಮಟ್ಟದಲ್ಲಿ ನೋಡುವ ಪ್ರವೃತಿ ಬೆಳೆಸಿಕೊಂಡಿದ್ದೇವೆ. ಇದು ನಾಗರಿಕ ಸಮಾಜಕ್ಕೆ ಶ್ರೇಷ್ಠವಲ್ಲ ಪ್ರತಿಯೊಬ್ಬರು ಇನ್ನೊಬ್ಬರನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಆಗ ಮಾನವ ಹಕ್ಕುಗಳು ಬೆಳೆದು ನಿಲ್ಲುತ್ತವೆ ಎಂದರು.
ದ.ಕ. ಜಿಪಂ ಉಪಕಾರ್ಯದರ್ಶಿ ಎನ್.ಆರ್.ಉಮೇಶ್ ಮಾತನಾಡಿದರು.ುನಾಯಿತ ಮಹಿಳೆಯರ ಒಕ್ಕೂಟದ ಅಧ್ಯಕ್ಷೆ ಸವಿತಾ ಟಿ.ಎನ್. ಹಾಗೂ ಕೃಷ್ಣ ಮೂಲ್ಯ ಉಪಸ್ಥಿತರಿದ್ದರು. ಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ರವೀಶ್ ಕುಮಾರ್ ಸ್ವಾಗತಿಸಿದರು. ಸಂಘಟಕ ಸುದರ್ಶನ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕ ಸಂತೋಷ್ ಶೆಟ್ಟಿ ವಂದಿಸಿದರು. ಕನ್ನಡ ವಿಭಾಗ ಮುಖ್ಯಸ್ಥೆ ಮಲ್ಲಿಕಾ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.ುಪಿ ಮಾನವ ಹಕ್ಕುಗಳ ರಕ್ಷಣಾ ವೇದಿಕೆಯ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಬಾಗ್ ಎರಡನೆ ಗೋಷ್ಠಿಯಲ್ಲಿ ಪ್ರಜಾಪ್ರಭುತ್ವದಲ್ಲಿ ಮಾನವ ಹಕ್ಕುಗಳ ಕಾರ್ಯಸೂಚಿ ಕುರಿತು ವಿವರಿಸಿದರು. ಮಾಜಿ ನರೇಗ ಒಂಬುಡ್ಸಮನ್ ಶೀನ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಮೂರನೆ ಗೋಷ್ಠಿಯಲ್ಲಿ ‘ಮಹಿಳೆಯರ ಹಕ್ಕುಗಳು ಮತ್ತು ಪಂಚಾಯತ್ ರಾಜ್ ವ್ಯವಸ್ಥೆ’ ಕುರಿತು ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೊಶನಿ ನಿಲಯದ ಅನುರಾಧಾ ಶೆಟ್ಟಿ ಮಾತನಾಡಿದರು. ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿವಿಯ ಸಹಪ್ರಾಧ್ಯಾಪಕ ಡಾ.ದಯಾನಂದ್ ನಾಯಕ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಪ್ರೊ.ಎಂ.ರವೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂತೋಷ್ ಶೆಟ್ಟಿ ಸ್ವಾಗತಿಸಿದರು. ಸುದರ್ಶನ ಕುಮಾರ್ ವಂದಿಸಿದರು. ಪ್ರಾಧ್ಯಾಪಕ ಸುಧೀಶ್ ಕಾರ್ಯಕ್ರಮವನ್ನು ನಿರೂಪಿಸಿದರು.





