ಕಬಡ್ಡಿ ವಿಶ್ವಕಪ್: ಪೊಲೆಂಡ್, ಬಾಂಗ್ಲಾ ಜಯಭೇರಿ

ಅಹ್ಮದಾಬಾದ್, ಅ.17: ಇಲ್ಲಿ ನಡೆಯುತ್ತಿರುವ ಕಬಡ್ಡಿ ವಿಶ್ವಕಪ್‌ನಲ್ಲಿ ಪೊಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳು ಜಯ ದಾಖಲಿಸಿವೆ.
ಸೋಮವಾರ ಇಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪೊಲೆಂಡ್ ತಂಡ ಇರಾನ್ ತಂಡವನ್ನು 41-25 ಅಂಕಗಳ ಅಂತರದಿಂದ ಮಣಿಸಿ ಶಾಕ್ ನೀಡಿತು. ಸಣ್ಣ-ಪುಟ್ಟ ತಪ್ಪೆಸಗಿದ ಇರಾನ್ ಸೋಲನುಭವಿಸಿತು. ಈಗಾಗಲೇ ಸೆಮಿ ಫೈನಲ್‌ಗೆ ಅರ್ಹತೆ ಪಡೆದಿರುವ ಇರಾನ್ ಟೂರ್ನಿಯಲ್ಲಿ ಮೊದಲ ಬಾರಿ ಸೋತಿದೆ. ಅಂಕಪಟ್ಟಿಯಲ್ಲಿ ಬಿ ಗುಂಪಿನಲ್ಲಿ 2ನೆ ಸ್ಥಾನಕ್ಕೆ ಕುಸಿದಿದೆ.
ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಆಸ್ಟ್ರೇಲಿಯವನ್ನು 80-8 ಅಂಕಗಳ ಭಾರೀ ಅಂತರದಿಂದ ಸೋಲಿಸಿ ಗಮನ ಸೆಳೆಯಿತು.
5ನೆ ಬಾರಿ ಆಲೌಟಾಗಿರುವ ಆಸ್ಟ್ರೇಲಿಯ ಟೂರ್ನಿಯಲ್ಲಿ 3ನೆ ಬಾರಿ ಸೋಲು ಕಾಣುವ ಮೂಲಕ ಕೂಟದಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿತು. ಬಾಂಗ್ಲಾದೇಶ ವಿಶ್ವಕಪ್‌ನಲ್ಲಿ ಗರಿಷ್ಠ ಮೊತ್ತ ದಾಖಲಿಸಿದ ತಂಡವೆಂಬ ಗೌರವಕ್ಕೆ ಪಾತ್ರವಾಯಿತು. ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿರುವ ಬಾಂಗ್ಲಾ ನಾಕೌಟ್ ಹಂತಕ್ಕೇರುವ ಕನಸು ಕಾಣುತ್ತಿದೆ.
Next Story





