Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಈ ಹೆಜ್ಜೆಯನ್ನು ವರ್ಷದ ಹಿಂದೆ...

ಈ ಹೆಜ್ಜೆಯನ್ನು ವರ್ಷದ ಹಿಂದೆ ಇಟ್ಟಿದ್ದರೆ?

ರಮಾನಂದ ಶರ್ಮಾರಮಾನಂದ ಶರ್ಮಾ17 Oct 2016 11:59 PM IST
share

ದಶಕಗಳಿಂದ ತಲೆನೋವಾಗಿರುವ ಮಹಾದಾಯಿ ಯೋಜನೆಯ ಬಗೆಗಿನ ವಿವಾದ ಮತ್ತು ಕಗ್ಗಂಟನ್ನು ಬಿಡಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನಿವೀಸ್ ಕರ್ನಾಟಕ ಮತ್ತು ಗೋವಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಮುಂಬೈಯಲ್ಲಿ ಈ ತಿಂಗಳು 21ರಂದು ಕರೆದಿದ್ದಾರೆ. ಸದ್ಯ ಲಭ್ಯ ಇರುವ ಮಾಹಿತಿಯಂತೆ ಸಭೆ ನಡೆಯುವುದು ಮತ್ತು ಸಂಬಂಧಪಟ್ಟ ಮುಖ್ಯಮಂತ್ರಿಗಳು ಭಾಗವಹಿಸುವುದು ನಿಶ್ಚಿತವಾಗಿದೆ. ನಳಿಕೆಯ ತುದಿಯಲ್ಲಿ ಬೆಳಕು ಎನ್ನುವಂತೆ, ಈ ಮಾತುಕತೆಯ ಫಲಪ್ರದತೆಯ ಬಗ್ಗೆೆ ಭಾರೀ ಆಶಾವಾದ ವ್ಯಕ್ತವಾಗಿದೆ. ಈ ವಿವಾದದ ಬಗೆಗೆ ಈ ವರೆಗೆ ಸುತ್ತಿ ಬಳಸಿ ಮಾತನಾಡುತ್ತಿದ್ದ ಕರ್ನಾಟಕದ ಭಾಜಪವು, ಒಮ್ಮೆಲೆ ಕ್ರಿಯಾಶೀಲತೆಯನ್ನು, ಬದ್ಧ್ದತೆಯನ್ನು ಮತ್ತು ತೀವ್ರ ಆಸಕ್ತಿಯನ್ನು ತೋರಿಸುತ್ತಿದೆ. ಕರ್ನಾಟಕದಲ್ಲಿ ಭಾಜಪದ ತ್ರಿಮೂರ್ತಿಗಳಾದ, ಅನಂತ ಕುಮಾರ್, ಜಗದೀಶ್ ಶೆಟ್ಟರ್, ಮತ್ತು ಪ್ರಹ್ಲಾದ್ ಜೋಷಿಯವರು ಬೆಂಗಳೂರು, ಹುಬ್ಬಳ್ಳಿ ಮತ್ತು ಮುಂಬೈ ಮಧ್ಯೆ ಭಾರೀ ಹಾರಾಟ ನಡೆಸುತ್ತಿದ್ದಾರೆ. ಕರ್ನಾಟಕದ ಜನತೆ, ಅದರಲ್ಲೂ ಮುಖ್ಯವಾಗಿ ಉತ್ತರ ಕರ್ನಾಟಕದ ಜನತೆ ಭಾರೀ ನಿರೀಕ್ಷೆಯಲ್ಲಿ ಆ ದಿನವನ್ನು ಎದುರು ನೋಡುತ್ತಿದ್ದಾರೆ. ಈ ದಿಢೀರ್ ಬೆಳವಣಿಗೆಯ ಹಿಂದಿನ ಕಾರಣ ಏನು?

ತೀರಾ ಇತ್ತೀಚಿನ ವರೆಗೆ ಮೋದಿಯವರ ಮಧ್ಯಸ್ಥಿಕೆ ಸಾಧ್ಯವಿಲ್ಲ, ಮುಖ್ಯಮಂತ್ರಿಗಳ ಸಭೆ ಸಾಧ್ಯವಾಗದು, ಪ್ರಕರಣ ನ್ಯಾಯ ಮಂಡಲಿಯಲ್ಲಿ ಇರುವುದರಿಂದ ಅದು ಅಲ್ಲಿಯೇ ತೀರ್ಮಾನ ಆಗಬೇಕು ಎಂದೆಲ್ಲಾ ಪಿಟೀಲು ಕುಯ್ಯುತ್ತಿದ್ದ, ಕರ್ನಾಟಕದ ಭಾಜಪ, ದಿಢೀರ್ ನಿಲುವು ಬದಲಿಸಿದ್ದು ಏಕೆ? ತಮ್ಮ ಇತ್ತೀಚಿನ ಭೇಟಿಯಲ್ಲಿ, ಕರ್ನಾಟಕದ ರಾಜ್ಯ ಸಭಾ ಸದಸ್ಯೆ ಮತ್ತು ಕೇಂದ್ರ ವಾಣಿಜ್ಯ ಮಂತ್ರಿ ನಿರ್ಮಲಾ ಸೀತಾರಾಮನ್ ಕೂಡಾ ಇದೇ ರಾಗದಲ್ಲಿ ಮಾತನಾಡಿದ್ದರು. ಕರ್ನಾಟಕ ಭಾಜಪದ ಪ್ರತಿಯೊಬ್ಬ ಧುರೀಣರೂ ಇದೇ ರಾಗ ಮತ್ತು ತಾಳಕ್ಕೆ ಹೆಜ್ಜೆ ಹಾಕಿದ್ದರು.
           ಮೇಲು ನೋಟಕ್ಕೆ ಇದು ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್‌ರ ಅಸಕ್ತಿ. ಇದು ಇದ್ದರೂ ಇರಬಹುದು. ಆದರೆ, ರಾಜಕೀಯ ವಿಶ್ಲೇಷಕರು ಇದನ್ನು ನಂಬುತ್ತಿಲ್ಲ. ಕುಡಿಯುವ ನೀರಿಗಾಗಿ ಮಹಾದಾಯಿ ಹೋರಾಟ ಕಳೆದ ಒಂದು ವರ್ಷದಿಂದ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿದೆ. ಈ ಹೋರಾಟದಲ್ಲಿ ಬಹಳಷ್ಟು ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಹಲವರು ಪೊಲೀಸರಿಂದ ಲಾಠಿ ಪೆಟ್ಟು ತಿಂದಿದ್ದಾರೆ. ಕೆಲವರು ಜೀವ ತೆತ್ತಿದ್ದಾರೆ. ನೂರಾರು ಜನರು ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಪ್ರಕರಣದಿಂದ ಹೊರಬರಲು ಈ ಅಮಾಯಕರು ಅದೆಷ್ಟು ವರ್ಷ ನ್ಯಾಯಾಲಯಕ್ಕೆ ಓಡಾಡಬೇಕೋ? ಸತ್ಯಾ- ಸತ್ಯತೆ ಏನೇ ಇರಲಿ, ಈ ಭಾಗದ ಜನತೆಯಲ್ಲಿ ಕೇಂದ್ರದಲ್ಲಿರುವ ಭಾಜಪ ಸರಕಾರ ಏನೂ ಮಾಡಿಲ್ಲ ಎನ್ನುವ ಅಕ್ರೋಶ ಇದ್ದು, ಅದು ಮುಗಿಲು ಮುಟ್ಟಿದೆ. ಹೊರಗೆ ಹೇಳಿಕೊಳ್ಳದಿದ್ದರೂ ಕರ್ನಾಟಕದ ಭಾಜಪದ ನಾಯಕರೂ ಇದನ್ನು ತೀವ್ರವಾಗಿ ಗಮನಿಸಿದ್ದಾರೆ. ಗಾಯದ ಮೇಲೆ ಬರೆ ಎನ್ನುವಂತೆ, ಕಾವೇರಿ ನದಿ ನೀರು ವಿವಾದದಲ್ಲಿ, ನ್ಯಾಯಾಲಯದಲ್ಲಿನ ಸೋಲು, ಕಾವೇರಿ ನೀರು ನಿರ್ವಹಣಾ ವ್ಯವಸ್ಥೆಗೆ ಅಟಾರ್ನಿ ಜನರಲ್‌ರ ಒಪ್ಪಿಗೆ ಅವರನ್ನು ದಿಗ್ಭ್ರಾಂತಗೊಳಿಸಿದೆ. ನ್ಯಾಯಾಲಯದ ಸೋಲಿಗಿಂತ ಅಟಾರ್ನಿ ಜನರಲ್ ನಿಲುವು ಅವರ ಜಂಘಾಬಲವನ್ನು ಉಡುಗಿಸಿದ್ದು, ಇದರ ಪರಿಣಾಮ 2018ರ ವಿಧಾನ ಸಭಾ ಚುನಾವಣೆಯಲ್ಲಿ ವ್ಯತಿರಿಕ್ತವಾಗಬಹುದೆಂದು ಮತ್ತು ಮತದಾರರು ನೀರು ಕುಡಿಸಬಹುದೆಂದು, ಅವರು ಕೂಡಲೇ ಜಾಗೃತರಾಗಿದ್ದಾರೆ. ಅಟಾರ್ನಿ ಜನರಲ್ ತಮ್ಮ ನಿಲುವನ್ನು ಬದಲಿಸಿದಾಗಲೇ ಇವರು ಜಾಗೃತರಾಗಿದ್ದಾರೆ ಎನ್ನುವ ಸಂದೇಶ ಕರ್ನಾಟಕದ ಜನತೆಗೆ ಸಿಕ್ಕಿತ್ತು. ಇದರ ಹಿಂದೆ ಪಕ್ಷದ ವರಿಷ್ಠರು ಸಾಕಷ್ಟು ಚಿಂತನ-ಮಂಥನ ಮತ್ತು ಬೈಠಕ್ ಮಾಡಿರುತ್ತಾರೆ ಎನ್ನುವ ರಾಜಕೀಯ ಪಂಡಿತರ ಲೆಕ್ಕಾಚಾರದಲ್ಲಿ ಅರ್ಥವಿಲ್ಲದಿಲ್ಲ. ನಿಷ್ಕ್ರಿಯತೆ ಮತ್ತು ಮೌನದಿಂದ ಒಂದು ರಾಜ್ಯವನ್ನು ಚುನಾವಣೆಯಲ್ಲಿ ಕಳೆದುಕೊಳ್ಳಬಾರದು ಎನ್ನುವ ಚುನಾವಣಾ ಸೂತ್ರವನ್ನು ಭಾಜಪ ಸ್ವಲ್ಪತಡವಾಗಿ ಕಂಡುಕೊಂಡಂತಿದೆ.
 ಕೆಲವು ವದಂತಿಗಳ ಪ್ರಕಾರ, ಕರ್ನಾಟಕ ಭಾಜಪವು ಮಹಾದಾಯಿ ಮತ್ತು ಕಾವೇರಿ ಹೋರಾಟದ ಸುದೀರ್ಘ ಹಿನ್ನಲೆಯಲ್ಲಿ, ಮುಂಬರುವ ಚುನಾವಣೆಯಲ್ಲಿ ಪಕ್ಷದ ಭವಿಷ್ಯದ ಮೇಲೆ ಅಗುವ ಪರಿಣಾಮ ಬಗೆಗೆ ಆಂತರಿಕ ಸಮೀಕ್ಷೆ ನಡೆಸಿದ್ದು, ಈ ಸಮೀಕ್ಷೆಯ ವರದಿ ಭಾಜಪದ ವರಿಷ್ಠರನ್ನು ಎಚ್ಚರಿಸಿದ್ದು, ಅದು ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಪ್ರೇರೇಪಿಸಿದೆ ಎನ್ನಲಾಗುತ್ತಿದೆ. ಇದರ ಸತ್ಯಾ-ಸತ್ಯತೆ ಏನೇ ಇರಲಿ, ದಿನಬೆಳಗಾಗುವುದರೊಳಗಾಗಿ ನಡೆದ ಕರ್ನಾಟಕ ಪರವಾದ ಕೆಲವು ಬೆಳವಣಿಗೆಗಳು, ಇಂಥಹ ವದಂತಿಗಳಿಗೆ ಪುಷ್ಟಿ ಕೊಡುತ್ತಿವೆ.
   ವರ್ಷದಿಂದ ಕೇಂದ್ರ ಸರಕಾರ, ಪ್ರಧಾನಿ ಮತ್ತು ಕರ್ನಾಟಕ ಭಾಜಪ ತಾವು ಮಧ್ಯಪ್ರವೇಶಿಸಲು ಸಾಧ್ಯವಾಗದು ಎನ್ನುವ ನಿಲುವು ತೋರಿಸಿದ್ದು, ಅದಕ್ಕೆ ಬದ್ಧರಾಗಿರಲು, ಮಹಾರಾಷ್ಟ್ರ ಮುಖ್ಯಮಂತ್ರಿ ಮೂಲಕ ಈ ರೀತಿ ನಾಟಕ ಆಡಿದ್ದಾರೆನ್ನುವ ರಾಜಕೀಯ ವೀಕ್ಷಕರ ತರ್ಕದಲ್ಲಿ ಅರ್ಥವಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಈ ಹಿಂದೆ ಯಾವುದೇ ಆಸಕ್ತಿ ತೋರಿಸಿರಲಿಲ್ಲ. ಗೋವಾ ಮುಖ್ಯಮಂತ್ರಿ ಮಾತುಕತೆಯ ಪ್ರಸ್ತಾಪವನ್ನೇ ತಳ್ಳಿ ಹಾಕಿದ್ದರು. ನ್ಯಾಯಮಂಡಳಿಯೆ ನಿರ್ಣಯಿಸಲಿ ಎನ್ನುವ ದೃಢವಾದ ನಿಲುವನ್ನು ಹೊಂದಿದ್ದರು. ಸಮಸ್ಯೆ ಬಗೆಹರಿಯುವುದು ಅಥವಾ ಹಾಗೆ ಉಳಿಯುವುದು ಬೇರೆ ವಿಷಯ.
 ಆದರೆ, ಏನಾದರೂ ಸಕಾರಾತ್ಮಕ ನಿರ್ಣಯವಾದರೆ, ಬೆನ್ನು ಚಪ್ಪರಿಸಿಕೊಳ್ಳಲು ಭಾಜಪಕ್ಕೆ ಒಳ್ಳೆ ಅವಕಾಶ. ಆಗದಿದ್ದರೆ. ‘‘ನಾವು ಪ್ರಯತ್ನಿಸಿದೆವು...ಗೋವಾದ ಅಸಹಕಾರದಿಂದ ನೀರು ಹರಿಯಲಿಲ್ಲ’’ ಎಂದು ರಕ್ಷಣಾತ್ಮಕ ಬ್ಯಾಟ್ ಬೀಸಬಹುದು. ರೈತನ ಬವಣೆ ಮತ್ತು ಕುಡಿಯುವ ನೀರಿನ ದಾಹಕ್ಕಿಂತ, ಮುಂಬರುವ ಚುನಾವಣೆಯಲ್ಲಿ ಸೋಲುವ ಭಯ ರಾಜಕಾರಣಿಗಳನ್ನು ದಿಢೀರ್ ಎಚ್ಚರಗೊಳಿಸಿದೆ. ರಾಜ್ಯದಲ್ಲಿ ಚುನಾವಣೆಗೆ ಇನ್ನು ಕೇವಲ 18 ತಿಂಗಳುಗಳು ಮಾತ್ರ.
  

share
ರಮಾನಂದ ಶರ್ಮಾ
ರಮಾನಂದ ಶರ್ಮಾ
Next Story
X